ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆವೆ ಮಣ್ಣಿನ ಕಲಾಕೃತಿ ಕಾರ್ಯಾಗಾರ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆವೆ ಮಣ್ಣಿನ ಕಲಾಕೃತಿ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲಲಿತಾ ಕಲಾ ಕ್ಲಬ್ ವತಿಯಿಂದ `ಆವೆ ಮಣ್ಣಿನ ಕಲಾಕೃತಿಗಳ ಒಂದು ದಿನದ ಕಾರ್ಯಗಾರ ಅಯೋಜಿಸಲಾಯಿತು.

ಕಲಾವಿದ ವೆಂಕಿ ಪಲಿಮಾರು ಉಡುಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಣ್ಣಿನ ಕಲಾಕೃತಿಗಳಿಗೆ ಇಂದು ಅಗಾಧವಾದ ಬೇಡಿಕೆಯಿದೆ. ವಿದ್ಯಾರ್ಥಿಗಳು ಮಣ್ಣಿನ ಹಾಗೂ ಇತರ ಕಲಾಕೃತಿಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಬೇಕು ಎಂದರು.

ಕಾಲೇಜಿನ ಅನೇಕ ವಿದ್ಯಾರ್ಥಿಗಳಿಗೆ ಮಣ್ಣಿನ ಬಳಕೆಯನ್ನು ಕಲೆಯಲ್ಲಿ ಹೇಗೆ ಬಳಸಲಾಗುತ್ತದೆ ಮತ್ತು ಅದನ್ನು ಯಾವ ರೀತಿಯಲ್ಲಿ ಹದ ಮಾಡಬಹುದೆಂದು ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಣ್ಣಿನ ಕಲಾಕೃತಿಯನ್ನು ರಚಿಸಲು ಅವಕಾಶ ನಿಡಲಾಯಿತು.

ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ವಾಸುದೇವ್ ಶಹಾಪೂರ್ ಮಾತನಾಡಿ, ಕಲೆ ಜೀವನದ ಅವಿಭಾಜ್ಯ ಅಂಗ. ಕಲೆಯ ಮೂಲಕ ಸಮಾಜ ಕಟ್ಟುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕು ಎಂದರು.

ಕಾರ್ಯಾಗಾರದ ಸಂಯೋಜಕ, ಪ್ರಾಧ್ಯಾಪಕ ಗಣೇಶ್ ಅಚಾರ್ಯ ಉಪಸ್ಥಿತರಿದ್ದರು.


Spread the love