Home Mangalorean News Kannada News ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿಎನ್‍ಸಿ ಕಾರ್ಯಾಗಾರ ಸಂಪನ್ನ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿಎನ್‍ಸಿ ಕಾರ್ಯಾಗಾರ ಸಂಪನ್ನ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿಎನ್‍ಸಿ ಕಾರ್ಯಾಗಾರ ಸಂಪನ್ನ

ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಪಡೆದತಂಹ ಮಾಹಿತಿಯನ್ನು ಮುಂದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಯಶಸ್ವಿ ಜೀವನವನ್ನು ನಡೆಸಲು ಸಾದ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 7 ದಿನಗಳು ನಡೆದ ಸಿ.ಎನ್.ಸಿ (ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್) ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಐ.ಐ.ಟಿ ಮತ್ತು ಡಿಪೆÇ್ಲಮ ಮಾಡಿದವರಿಗೆ ಅತಿ ಹೆಚ್ಚು ಬೇಡಿಕೆ ಇದೆ. ಉದ್ಯೋಗವಕಾಶ ಕಡಿಮೆ ಇದೆ ಎನ್ನುವ ಮಾತು ಸತ್ಯಕ್ಕೆ ದೂರ ಅದರೆ ವಿದ್ಯಾರ್ಥಿಗಳಲ್ಲಿ ಕೌಶಲ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ

ಪೆÇ್ರಪೆಸರ್ ಹೆಮಂತ್ ಸುವರ್ಣ, ಪೆÇ್ರಪೆಸರ್ ಪ್ರಮೋದ್ ಕುಮಾರ್ ಎನ್, ಪೆÇ್ರಪೆಸರ್ ಸುಧೀರ್ ಪಿ.ಎನ್, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಶ್ರೀ ದುರ್ಗಾದೇವಿ ಐ.ಐ.ಟಿ ನಿಡೊಡ್ಡಿ ಕಾಲೇಜಿನ ಪ್ರಾಂಶುಪಾಲ ಅನುರಾಧಾ ಸಾಲ್ಯಾನ್ , ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹರೀಶ್ ಆನಂದ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಐ.ಐ.ಟಿ ಮತ್ತು ಡಿಪೆÇ್ಲಮ ಕಲಿಯುತ್ತಿರುವ 52 ಮಂದಿ ಭಾಗವಹಿಸಿದರು.


Spread the love

Exit mobile version