ಆಳ್ವಾಸ್ ‘ಐಇಟಿಇ ವಿದ್ಯಾರ್ಥಿ ವೇದಿಕೆ’ ಉದ್ಘಾಟನಾ ಕಾರ್ಯಕ್ರಮ
ಮೂಡಬಿದಿರೆ: ಇಂದಿನ ಕಾಲದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳಿಲ್ಲದೆ ಯಾವುದು ಕೂಡ ಇಲ್ಲ. ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳಿಗೂ ಮಾತೃಸ್ಥಾನದಲ್ಲಿ ನಿಲ್ಲುತ್ತದೆ ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ‘ಐಇಟಿಇ ವಿದ್ಯಾರ್ಥಿ ವೇದಿಕೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐಇಟಿಇ ವಿದ್ಯಾರ್ಥಿ ವೇದಿಕೆಯ ಮುಖ್ಯ ಉದ್ದೇಶ ಜ್ಞಾನವನ್ನು ಹರಡುವುದಾಗಿದೆ. ಇದು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷತೆಯನ್ನು ವಹಿಸಿದ್ದ ಐಎಮ್‍ಎಪಿಎಸ್‍ನ ಸಹ ಅಧ್ಯಕ್ಷ ಪ್ರೊ. ಸಿ ಮುರಳಿ ಮಾತನಾಡಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್‍ನಲ್ಲಿರುವ ಉದಯೋನ್ಮುಖ ಪ್ರವೃತ್ತಿ ಬಗ್ಗೆ ತಿಳಿಸಿದರು.
ಯಾವುದೇ ವಿಷಯದಲ್ಲಾದರು ಕೂಡ ಅದರ ಮೂಲ ತಿಳಿಯದೇ ಯಾವುದೇ ಕಾರ್ಯ ಸಾಧ್ಯವಿಲ್ಲ. ಅಂಕಿ ಅಂಶ, ಮಾಹಿತಿ, ಜ್ಞಾನ, ವಿವೇಕ ಇವುಗಳು ಮೂ¯ ಅಂಶಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಐಇಟಿಇನ ಅಧ್ಯಕ್ಷ ಪ್ರೊ,ಭಾಟಿಯಾ, ಐಇಟಿಇನ ಸಂಚಾಲಕರಾದ ಡಾ. ಡಿ ವಿ ಮಂಜುನಾಥ, ಡಾ. ದತ್ತಾತ್ರೇಯ, ಡಾ. ಪ್ರವೀಣ್ ಜೆ, ಮತ್ತು ವಿದ್ಯಾರ್ಥಿ ಪ್ರತಿನಿಧಿ ಧೀರಜ್ ಶೆಟ್ಟಿ, ಮಯೂರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್ ವಿಭಾಗದ ವಿದ್ಯಾರ್ಥಿ ಐಶ್ವರ್ಯ ನಿರೂಪಿಸಿದರು.