ಆಳ್ವಾಸ್ ನಲ್ಲಿ ಐಎಸ್ಒ ಕಾರ್ಯಾಗಾರ ಸಂಪನ್ನ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ಐಎಸ್ಒ 9000 ಮತ್ತು 14000 ಗುಣಮಟ್ಟದ ಕುರಿತಾದ ಐದು ದಿನಗಳ ಕಾರ್ಯಾಗಾರವು ಫೆ 1 ರಂದು ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯ ಅತಿಥಿ ಮೈಸೂರಿನ ಜೆ ಎಸ್ ಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ . ಕೆ ಎಸ್ ಲೋಕೇಶ್ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಉತ್ಪನ್ನಗಳ ಗುಣಮಟ್ಟದಕುರಿತು ಸಂಶೋಧನೆ ನಡೆಸಿ ಉತ್ಕೃಷ್ಟತೆಯ ಬಗ್ಗೆ ಗಮನಹರಿಸಬೇಕೆಂದು ಕರೆಯಿತ್ತರು . ಕರ್ನಾಟಕ ಮಾಲಿನ್ಯನಿಯಂತ್ರಣ ಮಂಡಳಿ , ಮೈಸೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ರವಿ ಡಿ ಆರ್ , ಜೆ ಎಸ್ ಎಸ್ವಿಜ್ಞಾನ ಮತ್ತು ತಾಂತ್ರಿಕ ಕಾಲೇಜಿನ ಡಾ . ಉದಯ ಶಂಕರ್ , ಕಾರ್ಯಾಗಾರದ ಸಂಚಾಲಕ ಪ್ರೊ ಸಂಜಯ್ , ಪ್ರೊಉಮೇಶ್ ಚಂದ್ರ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಐಶ್ವರ್ಯ ಲಕ್ಷ್ಮಿ ಸ್ವಾಗತಿಸಿದರು . ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ ಅಜಿತ್ ಹೆಬ್ಬಾರ್ ವಂದಿಸಿದರು . ಪ್ರೊಆದಿತ್ಯ ಶೆಣೈ ಕಾರ್ಯಕ್ರಮ ನಿರೂಪಿಸಿದರು .