Home Mangalorean News Kannada News ಆಳ್ವಾಸ್ ನುಡಿಸಿರಿ-2018ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ವೈಭವದ ಚಾಲನೆ

ಆಳ್ವಾಸ್ ನುಡಿಸಿರಿ-2018ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ವೈಭವದ ಚಾಲನೆ

Spread the love

ಆಳ್ವಾಸ್ ನುಡಿಸಿರಿ-2018ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ವೈಭವದ ಚಾಲನೆ

ಬಹುತ್ವದ ಸಂಸ್ಕøತಿಯ ಬುನಾದಿಯನ್ನು ಸಾಹಿತ್ಯದೊಳಗೆ ಕಾಣಲುಕಷ್ಟಸಾಧ್ಯ – ಡಾ.ಷ. ಶೆಟ್ಟರ್

ಮೂಡುಬಿದಿರೆ: ಅಕ್ಷರ ಸಂಸ್ಕøತಿಯಲ್ಲಿಬಹುತ್ವದ ಸಂಸ್ಕøತಿಯ ಬುನಾದಿಯನ್ನು ಸಾಹಿತ್ಯದೊಳಗೆ ಕಾಣಲುಕಷ್ಟಸಾಧ್ಯ, ಸಾಹಿತ್ಯ ಭಾಷೆ, ಕಲೆ, ಸಾಮಾಜಿಕವಾಗಿ ಮುಂದುವರೆದು ವರ್ಣ ಮುಕ್ತ ಸಂಸ್ಕøತಿಯನ್ನುಕನ್ನಡ ಸಮುದಾಯದೊಳಗೆ ಕಾಣಬಹುದು, ಈ ದೇಶವನ್ನುಅಕ್ಷರಸ್ಥರನ್ನಾಗಿ ಮಾಡಿದಕೀರ್ತಿಕರ್ನಾಟಕಕ್ಕೆ ಸಲ್ಲುತ್ತದೆ. ಅಲ್ಲದೆಒಂದುಅಕ್ಷರ ಸಂಸ್ಕøತಿಯ ವಿನಾಶ ಒಂದುಜನಾಂಗದ ನಾಶಕ್ಕೆ ಸಮಾನವಾದುದೆಂದುಖ್ಯಾತ ಸಂಶೋಧಕಡಾ.ಷ. ಶೆಟ್ಟರ್‍ಹೇಳಿದರು.

ವಿದ್ಯಾಗಿರಿಯರತ್ನಾಕರವರ್ಣಿ ವೇದಿಕೆಯಲ್ಲಿ ಸತತ ಮೂರು ದಿನಗಳ ಕಾಲ ನಡೆಯಲಿರುವಕನ್ನಡ ನಾಡು-ನುಡಿಯರಾಷ್ಟ್ರೀಯ  ಸಮ್ಮೇಳನ ಆಳ್ವಾಸ್ ನುಡಿಸಿರಿ-2018 ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಕಳಸಿಗೆಯ ಮೇಲಿಟ್ಟ ಭತ್ತದತೆನೆಗೆ ಹಾಲೆರೆದು, ಭಗದ್ಗೀತೆಯ ಪುಟತೆರೆಯುವುದರ ಮೂಲಕ ಉದ್ಘಾಟಿಸಿ ಅವರುಮಾತನಾಡಿದರು.

ಅಶೋಕ ಚಕ್ರವರ್ತಿಯಕಾಲಾವಧಿಯಲ್ಲಿಕನ್ನಡ ಭಾಷೆಯು ಬೆಳವಣಿಗೆಯ ಹಾದಿಯ ಶ್ರೇಯಸ್ಸುಅವರಿಗೆ ಸಲ್ಲುತ್ತದೆ.ನಾವು ಅನಾದಿ ಕಾಲದಿಂದ ಬೆಳೆದು ಬಂದಅಕ್ಷರ ಸಂಸ್ಕøತಿಯನ್ನು ಅನುಸರಿಸಿಕೊಂಡು ಬೆಳೆಯುತ್ತಿದ್ದೇವೆ. ಅಕ್ಷರ ವ್ಯವಹಾರದಲ್ಲಿಕನ್ನಡ ಮೊದಲನೆಯ ಸ್ಥಾನದಲ್ಲಿದ್ದು,  ಸಮಾಜದಲ್ಲಿ ಬಹುತ್ವವನ್ನುಕಾಣುವ ಬದಲುಏಕತ್ವವನ್ನುಕಾಣುವ ಪ್ರಯತ್ನ ಮಾಡುತ್ತಿದ್ದೇವೆಎಂದರು.

ಕನ್ನಡದಉಗಮವಾದುದು ಹಲ್ಮಿಡಿ ಶಾಸನದತರುವಾಯ ಎಂಬ ಮಾತುಅರ್ಧ ಸತ್ಯವಾಗಿದ್ದು ಹಲ್ಮಿಡಿ ಶಾಸನಕ್ಕಿಂತಲೇ ಮೊದಲೇಕನ್ನಡದಉಗಮವಾಗಿದೆ.ಪಾಶ್ಚಾತ್ಯ ಪಂಡಿತರ ನಡುವಿದ್ದದ್ವಂದ್ವದ ಪರಿಣಾಮ ಐತಿಹಾಸಿಕ ಆಧಾರಗಳು ಸರಿಯಾದಉಲ್ಲೇಖವಿಲ್ಲ ಎಂದುಅವರು ತಿಳಿಸಿದರು.

ನಾನು ಈ ವರೆಗೆ ಬೇರೆಯವರುನೀಡಿದಇತಿಹಾಸವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದು, ಅದನ್ನು ನನ್ನ ವಿದ್ಯಾರ್ಥಿಗಳು ಅದನ್ನೆ ಮನನ ಮಾಡಿಕೊಂಡಿದ್ದಾರೆ. ನಾನೇ ತಿಳುವಳಿಕೆ ಮಾಡಿಕೊಂಡಇತಿಹಾಸವನ್ನು ಬೋಧಿಸುವಲ್ಲಿಎಡವಿದ್ದೇನೆಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇತಿಹಾಸ, ಸಂಸ್ಕøತಿಯಅಧ್ಯಯನಕಾರರು  ಹಳೆಯ ಪಠ್ಯಪುಸ್ತಕವನ್ನುಅಧ್ಯಯನಕ್ಕಾಗಿಅಲ್ಲದೆ ಕೇವಲ ಕುತೂಹಲಕ್ಕಾಗಿಓದಬೇಕೇ ವಿನಃ ಹೊಸ ಚಿಂತನೆಗಾಗಿ ಸ್ವ ಸಂಶೋಧನೆಗೆತೊಡಗಬೇಕುಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಹಿತಿ ಮತ್ತು ಸಂಶೋಧಕಿಡಾ.ಮಲ್ಲಿಕಾಎಸ್. ಘಂಟಿ, ” ಭಾಷೆಯನ್ನು, ಧರ್ಮವನ್ನು ಮನುಷ್ಯನ್ನುಏಕರೂಪಿಯಾಗಿಕಲ್ಪಿಸುವುದೇ ವಿಚಿತ್ರವಾಗಿದೆ.ಇತಿಹಾಸದಜೊತೆಗೆ ವರ್ತಮಾನದ ಭವಿಷ್ಯವನ್ನುರೂಪಿಸುವ ಜವಾಬ್ದಾರಿ ನಮ್ಮಮೇಲಿದೆ.ಇದನ್ನರಿತುಇಂದಿನ ದಿನಗಳಲ್ಲಿ ನಮ್ಮ ಸೃಜನಶೀಲತೆಯನ್ನು, ಸಾಮಾಜಿಕತೆಯನ್ನು, ಧಾರ್ಮಿಕ ಪರಿಸರವನ್ನು, ರಾಜಕೀಯ ಸಿದ್ಧಾಂತಗಳನ್ನು, ಭಾಷಾ ವೈವಿಧ್ಯತೆಗಳನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.

ಏಕ ಸಂಸ್ಕøತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿರುವ ಧರ್ಮಗಳೆಲ್ಲವೂ ಇಂದು ಹಿಂಸಾ ಸ್ವರೂಪ ತಾಳುತ್ತಿವೆ. ಅದಕ್ಕಿರುವ ಕೇಂದ್ರ ಆಶಯವೇ ಹಿಂಸೆ. ಹೀಗಾಗಿ ಒಂದು ಹಂತದಲ್ಲಿ ಜನಪರವಾಗಿದ್ದಂತಹ ಧರ್ಮಗಳು ನಂತರದಲ್ಲಿ ನಿರಂಕುಶಮತಿಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ನಂಬಿಕೆ ಆಚಾರಗಳು ಎಲ್ಲ ಕಾಲಕ್ಕೆ ನಿಯಂತ್ರಕಗಳಾಗಿ ನಿಲ್ಲುವುದರ ಹಿಂದೆ ಬಹುದೊಡ್ಡ ರಾಜಕಾರಣವಿರುತ್ತದೆ. ಅದು ಲಿಂಗ ರಾಜಕಾರಣವೂ ಹೌದು ಧಾರ್ಮಿಕ ರಾಜಕಾರಣವೂ ಆಗಿರುತ್ತದೆ. ವೈಜ್ಞಾನಿಕದೃಷ್ಟಿಯಲ್ಲಿ ತೀರ್ಪನ್ನು ಕಾಣದೇ ಅದೆಷ್ಟೋ ಜನ ಪರ-ವಿರೋಧದ ನಡುವೆ ಹೋರಾಡುತತಿದ್ದಾರೆ ಎಂದು ಅವರು ತಿಳಿಸಿದರು.

ರಾಮ-ರಹೀಮರುಕತ್ತಿ ಮಸಿಯುತ್ತಿರುವುದೇಕೆ? ಅಮಾಯಕರರಕ್ತ ಬೀದಿಯಲ್ಲಿ ಬೀಳದಂತೆ ನೋಡುವಜವಾಬ್ದಾರಿ ಬರಹಗಾರರ ಮೇಲಿದ್ದು ಕವಿ, ಲೇಖಕ, ಕಲಾವಿದನ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಅವರು ತಿಳಿಸಿದರು.

ಶಿಕ್ಷಣ, ಆರೋಗ್ಯ, ಆಹಾರ, ವಸತಿ ಈ ಸಂಗತಿಗಳು ರಾಷ್ಟ್ರೀಕರಣಗೊಳ್ಳಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಎಲ್ಲವೂ ನಿಲುಕುವಂತೆ ಆದಾಗ ಕಲಿಕಾ ಮಾಧ್ಯಮದ ಬಗ್ಗೆ ಮಾತನಾಡಿದರೆ ಅಕ್ಷರ ವಂಚಿತ ಲೋಕ ಕೇಳಬಲ್ಲದು ಎಂದು ಅವರು ತಿಳಿಸಿದರು.

ಆಳ್ವಾಸ್ ನುಡಿಸಿರಿ ರೂವಾರಿಡಾ.ಎಂ.ಮೋಹನ ಆಳ್ವ ನುಡಿಸಿರಿ ಹಾಗೂ ಸಮ್ಮೇಳನದ ಪರಿಕಲ್ಪನೆಯಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅಭ್ಯಾಗತರನ್ನು ಸ್ವಾಗತಿಸಿದರು.

ಇದೇ ವೇಳೆಯಲ್ಲಿ ಉದ್ಘಾಟಕರನ್ನು, ಸಮ್ಮೇಳನದ ಅಧ್ಯಕ್ಷರನ್ನು ಗೌರವಿಸಲಾಯಿತು. ನಾರಾಯಣೀದಾಮೋದರ ವಿರಚಿತ “ನುಡಿ ನುಡಿತ” ಕೃತಿಯನ್ನು ಹಾಗೂ ಮಿಜಾರಿನ ಶೋಭಾವನದಕ್ಯೂ. ಆರ್‍ಕೋಡನ್ನು ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎ. ಉಮಾನಾಥಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರಜೈನ್, ಕೆ.ಅಮರನಾಥ ಶೆಟ್ಟಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ. ಶ್ರೀಪತಿ ಭಟ್, ದ.ಕಜಿಲ್ಲಾ ಸಾಹಿತ್ಯ ಪರಿಷತ್ತುಅಧ್ಯಕ್ಷ ಪ್ರದೀಪ್‍ಕುಮಾರ್‍ಕಲ್ಕೂರ, ಕ.ಸಾ.ಪ ಮಾಜಿರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕ್ಯಾಪ್ಟನ್‍ಗಣೇಶ್‍ಕಾರ್ಣಿಕ್, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತುಅಧ್ಯಕ್ಷ ನೀಲಾವರ ಸುರೇಂದ್ರಅಡಿಗ, ಜಯಶ್ರೀ ಅಮರನಾಥ ಶೆಟ್ಟಿ ಹಾಗೂ ನುಡಿಸಿರಿಯ ಘಟಕಾಅಧ್ಯಕ್ಷರು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ ನಿರೂಪಿಸಿದರು, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ವಂದಿಸಿದರು.

Click here to View More Photos


Spread the love

Exit mobile version