ಆಳ್ವಾಸ್ ಪದವಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ಕಾರ್ಯಗಾರ
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಆಫ್ ತಿಂಗ್ಸ್ (ಐಒಟಿ) ವಿಷಯದ ಮೇಲೆ ಇಂಟರ್ನ್‍ಷಿಪ್ ಕಾರ್ಯಗಾರವನ್ನು ಕಾಲೇಜಿನ ಬಿಸಿಎ ಲ್ಯಾಬ್‍ನಲ್ಲಿ ನಡೆಸಲಾಗುತ್ತಿದೆ.
ನವೆಂಬರ್ 18 ರಂದು ಆರಂಭವಾದ ಕಾರ್ಯಗಾರದಲ್ಲಿ 50 ಆಸಕ್ತ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಕಾರ್ಯಗಾರವೂ ನವೆಂಬರ್ 30ರ ತನಕ ನಡೆಯಲಿದೆ. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎನ್ವಿಶನ್ ಲ್ಯಾಬ್‍ನ ಹಿಮಾಂಶು ರಂಗಧೋಳ್ ಇಂಟರ್ನ್‍ಶಿಪ್ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಡಿಸೈನಿಂಗ್, ಕನ್ಸ್‍ಟ್ರಕ್ಷನ್ ಹಾಗೂ ಬೇಸಿಕ್ ಪ್ರೋಗ್ರಾಮಿಂಗ್ ಮಾಹಿತಿಯನ್ನು ಒದಗಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಈಗಾಗಲೇ ಡಿವೈಸ್ ಕಿಟ್ ನೀಡಲಾಗಿದ್ದು ಸೆನ್ಸಾರ್ ಕನೆಕ್ಟರ್ ಹೊಂದಿರುವ ಇಎಸ್‍ಪಿ-8266 ಮೈಕ್ರೋ ಕಂಟ್ರೋಲರ್ ಬೋರ್ಡ್‍ನ್ನು ಬಳಸಿ ಕ್ಲೌಡ್ ಕಂಟ್ರೋಲಿಂಗ್‍ಗಾಗಿ ಆಂಡ್ರಾಯ್ಡ್ ಆ್ಯಪನ್ನು ಡೆವೆಲಪ್ ಮಾಡಲಾಗಿದೆ. ಹ್ಯುಮಿಡಿಟಿ, ಟಿಲ್ಟ್ ಸ್ವಿಚ್, ಆಕ್ಸೆಲೆರೋಮೀಟರ್, ಗೈರೋಸ್ಕೋಪ್ ಮತ್ತು ಎಲ್‍ಡಿಆರ್ ಸೆನ್ಸಾರ್‍ಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು 11 ಸೆನ್ಸಾರ್‍ನೊಂದಿಗೆ ಕೆಲಸ ಮಾಡಲಿದ್ದು, ನಾಲ್ಕು ಜನರ ತಂಡಗಳನ್ನು ಮಾಡಲಾಗಿದ್ದು ಸಂಪೂರ್ಣ ಕೋಡನ್ನು ವಿದ್ಯಾರ್ಥಿಗಳೇ ಬರೆಯಲಿದ್ದಾರೆ. ನವೆಂಬರ್ 29ರಂದು ವಿದ್ಯಾರ್ಥಿಗಳು ಯೋಜನೆಯ ಡೆಮೋ ನೀಡಲಿದ್ದಾರೆ.