ಆಳ್ವಾಸ್ ಪದವಿ ಕಾಲೇಜಿನ ‘ವಿ ಇನ್‍ಸ್ಪೈರ್’ ಕಾರ್ಯಕ್ರಮ
ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೆಂಕ ಎಡಪದವಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವಿನ ವಿವೇಕಾನಂದ ಪ್ರೌಢಶಾಲೆಗಳಲ್ಲಿ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ದಿನದ ಜಾಗೃತಿ ಕಾರ್ಯಕ್ರಮ ‘ವಿ ಇನ್‍ಸ್ಪೈರ್’ ನಡೆಸಿದರು.
ಈ ಸಂದರ್ಭದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಪ್ರಕಾಶ್ ಉದಾಹರಣೆಯ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಯೋಗ, ಕೆಟ್ಟ ಸ್ಪರ್ಶ ಒಳ್ಳೆಯ ಸ್ಪರ್ಶ, ಋತುಚಕ್ರ, ಸ್ವ ರಕ್ಷಣೆ, ಮಾನಸಿಕ ಆರೋಗ್ಯದ ಮಹತ್ವ, ಒತ್ತಡ ನಿರ್ವಾಹಣೆಯಂತಹ ವಿಷಯಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳಾದ ದಿಶಾ ಶೆಟ್ಟಿ, ವಿಜೇತ ಜೈನ್, ಅಪೇಕ್ಷ, ನಸ್ಮ, ತೇಜು, ಆಕಾಶ್, ಸ್ಫೂರ್ತಿ, ತೇಜಸ್ವಿನಿ, ಉಪನ್ಯಾಸಕ ಜಿಶ್ಣುರವರ ಮಾರ್ಗದರ್ಶನದಲ್ಲಿ ಪಠ್ಯೇತರ ಚಟುವಟಿಕೆಂiÀi ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಿದರು.