ಆಳ್ವಾಸ್ ಪ್ರಾಧ್ಯಾಪಕಿ ಸವಿತಾ ಸುವರ್ಣ ರವರಿಗೆ ಡಾಕ್ಟರೇಟ್ ಪದವಿ
ಮೂಡಬಿದ್ರೆ: ಆಳ್ವಾಸ್ ಕಾಲೇಜ್ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಕಳೆದ 12 ವರ್ಷಗಳಿಂದ ಪ್ರಾಧ್ಯಾಪಕಿಯಾಗಿರುವ ಮಂಗಳೂರು ಬಜಾಲ್ ನ ಸವಿತಾ ಸುವರ್ಣ ರವರಿಗೆ ತಮಿಳುನಾಡಿನ ಕೊಯಮುತ್ತೂರು ಭಾರತಿಯಾರ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಅನ್ಕೋಲಜಿಯ ಸಮಾಜ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ.ಜಾನೆಟ್ ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ *ಎ ಸ್ಟಡಿ ಆನ್ ಕೋಪಿಂಗ್ ಪ್ಯಾಟರ್ನ್ ಆಫ್ ದಿ ಕೇರ್ಗಿವರ್ಸ್ ಆಫ್ ಸ್ಕೈಜೋಫ್ರೆನಿಕ್ ಪೇಶೆಂಟ್ಸ್ ಕೊರೆಲೇಟೆಡ್ ವಿತ್ ಪರ್ಸನಾಲಿಟಿ ಟೈಪ್ ಅಂಡ್ ಸೀವಿಯಾರಿಟಿ ಆಫ್ ದಿ ಇಲ್ ನೆಸ್* ಎಂಬ ವಿಷಯಕ್ಕೆ ಈ ಗೌರವ ಲಭಿಸಿದೆ.
ಇವರು ಅವಿಭಜಿತ ದ.ಕ.ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ.ಲಿಂಗಪ್ಪ ಸುವರ್ಣರವರ ಮೊಮ್ಮಗಳು, ಶ್ರೀ ಯತೀಶ್ ಬಂಗೇರರವರ ಧರ್ಮಪತ್ನಿ ಹಾಗೂ ಲಕ್ಷ್ ರವರ ತಾಯಿಯಾಗಿರುತ್ತಾರೆ.