Home Mangalorean News Kannada News ಆಳ್ವಾಸ್ ಪ್ರಾಧ್ಯಾಪಕಿ ಸವಿತಾ ಸುವರ್ಣ ರವರಿಗೆ ಡಾಕ್ಟರೇಟ್ ಪದವಿ

ಆಳ್ವಾಸ್ ಪ್ರಾಧ್ಯಾಪಕಿ ಸವಿತಾ ಸುವರ್ಣ ರವರಿಗೆ ಡಾಕ್ಟರೇಟ್ ಪದವಿ

Spread the love
RedditLinkedinYoutubeEmailFacebook MessengerTelegramWhatsapp

ಆಳ್ವಾಸ್ ಪ್ರಾಧ್ಯಾಪಕಿ ಸವಿತಾ ಸುವರ್ಣ ರವರಿಗೆ ಡಾಕ್ಟರೇಟ್ ಪದವಿ

ಮೂಡಬಿದ್ರೆ:  ಆಳ್ವಾಸ್ ಕಾಲೇಜ್ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಕಳೆದ 12 ವರ್ಷಗಳಿಂದ ಪ್ರಾಧ್ಯಾಪಕಿಯಾಗಿರುವ ಮಂಗಳೂರು ಬಜಾಲ್ ನ ಸವಿತಾ ಸುವರ್ಣ ರವರಿಗೆ ತಮಿಳುನಾಡಿನ ಕೊಯಮುತ್ತೂರು ಭಾರತಿಯಾರ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಅನ್ಕೋಲಜಿಯ ಸಮಾಜ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ.ಜಾನೆಟ್ ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ *ಎ ಸ್ಟಡಿ ಆನ್ ಕೋಪಿಂಗ್ ಪ್ಯಾಟರ್ನ್ ಆಫ್ ದಿ ಕೇರ್ಗಿವರ್ಸ್ ಆಫ್ ಸ್ಕೈಜೋಫ್ರೆನಿಕ್ ಪೇಶೆಂಟ್ಸ್ ಕೊರೆಲೇಟೆಡ್ ವಿತ್ ಪರ್ಸನಾಲಿಟಿ ಟೈಪ್ ಅಂಡ್ ಸೀವಿಯಾರಿಟಿ ಆಫ್ ದಿ ಇಲ್ ನೆಸ್* ಎಂಬ ವಿಷಯಕ್ಕೆ ಈ ಗೌರವ ಲಭಿಸಿದೆ.

ಇವರು ಅವಿಭಜಿತ ದ.ಕ.ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ.ಲಿಂಗಪ್ಪ ಸುವರ್ಣರವರ ಮೊಮ್ಮಗಳು, ಶ್ರೀ ಯತೀಶ್ ಬಂಗೇರರವರ ಧರ್ಮಪತ್ನಿ ಹಾಗೂ ಲಕ್ಷ್ ರವರ ತಾಯಿಯಾಗಿರುತ್ತಾರೆ.


Spread the love

Exit mobile version