ಆಳ್ವಾಸ್ ಯಕ್ಷಗಾನ ಚಿಕ್ಕಮೇಳಕ್ಕೆ ಚಾಲನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನೆ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಯಕ್ಷಗಾನ ಚಿಕ್ಕಮೇಳ ತಂಡಕ್ಕೆ ರಾಜ್ಯ ಸಚಿವ ಸಿ.ಟಿ ರವಿ ಅವರು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಹಂಸನಗರದಲ್ಲಿರುವ ನಿವಾಸದಲ್ಲಿ ಸೋಮವಾರ ಚಾಲನೆ ನೀಡಿದರು.
ಶ್ರೀವತ್ಸ, ಭುವನ್, ರಜತ್ ಶಬರೀಶ್ ಮುಮ್ಮೇಳ ಕಲಾವಿದರಾಗಿ, ಮನ್ವಿತ್ ಶೆಟ್ಟಿ (ಭಾಗವತಿಕೆ) ಸವಿನಯ್ ನೆಲ್ಲಿತೀರ್ಥ (ಚೆಂಡೆ), ಯಜ್ಞೇಶ್ ರೈ (ಮದ್ದಳೆ), ಕೀರ್ತನ್ (ಚಕ್ರತಾಳ) ಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ, ಯಕ್ಷಗಾನ ಮೇಳಗಳ ಯಜಮಾನ ಕಿಶಾನ್ ಹೆಗ್ಡೆ, ಸಂಸ್ಕಾರ ಭಾರತಿಯ ಚಂದ್ರಶೇಖರ್, ನಿತ್ಯಾನಂದ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಆಳ್ವಾಸ್ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಉಪನ್ಯಾಸ ಗುರುಪ್ರಸಾದ್ ಭಟ್ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದರು.