ಆಳ್ವಾಸ್ ರೀಚ್ 2020 ಹೆಲ್ತ್ ವಾಕ್-ಅ-ಥಾನ್
ಮೂಡುಬಿದಿರೆ: ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಬೆರೆತು, ಅದರಲ್ಲಿನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜತೆಗೆ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಬಜ್ಪೆ ಗ್ರಾಮ ಪಂಚಾಯತ್ ಪಿ.ಡಿ.ಓ ಸಾಯೀಶ ಚೌಟ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಪದವಿ ವಿಭಾಗ ಹೊಸಂಗಡಿ ಗ್ರಾಮ ಪಂಚಾಯತ್ನಲ್ಲಿ ಸಹಯೋಗದೊಂದೊಗೆ ಆಯೋಜಿಸಿದ್ದ ಆಳ್ವಾಸ್ ರೀಚ್ 2020 ‘’ಹೆಲ್ತ್ ವಾಕ್- ಅ- ಥಾನ್’’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಂiÀiನ್ ಮಾತನಾಡಿ, ಪ್ರತಿ ಸಂಸ್ಕøತಿ ಅಥವಾ ಸಮಾಜದ ಸ್ಥಳೀಯ ಜ್ಞಾನವು ವಿಭಿನ್ನತೆಯನ್ನು ಹೊಂದಿದೆ. ಇದು ಕೃಷಿ, ಆರೋಗ್ಯ, ಆಹಾರ ಸಂರಕ್ಷಣೆ , ಶಿಕ್ಷಣ, ನೈಸರ್ಗಿಕ ಸಂಪನ್ಮೂಲಗಳಲ್ಲಿ ಸ್ಥಳಿಯ ಮಟ್ಟದ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ಇಂತಹ ವಿಭಿನ್ನ ಕಲಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು
ಸಾಂಪ್ರದಾಯಿಕ ಬೆಲ್ಲ ಮತ್ತು ನೀರು ನೀಡುವುದರ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಹೊಸಂಗಡಿಯ ಸತ್ಯನಾರಯಣಕಟ್ಟೆಯಿಂದ ಅಟ್ಯಾಲ್ ಅರಣ್ಯದವರೆಗಿನ 8 ಕೀ.ಮೀ ದೂರವನ್ನು ಕಾಲುನಡಿಗೆಯಲ್ಲಿ ಸಾಗಿದರು. ಮಾರ್ಗ ಮಧ್ಯದಲ್ಲಿ ಸಿಗುವ ಮನೆಗಳಿಗೆÉ ಭೇಟಿ ನೀಡಿ ‘ಆರೋಗ್ಯ ಮತ್ತು ನೀರಿನ’ ಕುರಿತು ಜಾಗೃತಿಯನ್ನು ಮೂಡಿಸಿದರು. ಇದರ ಜತೆಗೆ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ನೀರು ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ, ಸ್ಕಿಟ್,ಮೈಮ್ ಶೋಗಳಂತಹ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿ ಮನೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಹಾಳೆ ತಟ್ಟೆ , ಮಣ್ಣಿನ ಮಡಿಕೆ, ತೆಂಗಿನ ಗೆರೆಟೆಗಳಲ್ಲಿ ಗ್ರಾಮೀಣ ಖಾದ್ಯಗಳಾದ ಗೆಣಸು, ಹುಣಿಸೆ ಬೀಜ, ಚಟ್ನಿ ಹಾಗೂ ಇನ್ನಿತರ ಖಾದ್ಯಗಳ ಆತಿಥ್ಯ ನೀಡಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭ ಹೊಸಂಗಡಿ ಗ್ರಾಮದ ಮೊಗೇರ ಕಾಲನಿಯಲ್ಲಿ ಜರುಗಿತು. ಇದೇ ಕಾಲನಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ನಕ್ಷೆಯನ್ನು ತಯಾರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಗಣೇಶ್ ಶೆಟ್ಟಿ, ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಡಾ. ಮಧುಮಾಲ, ಕಾರ್ಯಕ್ರಮ ಆಯೋಜಕರಾದ ಉಪನ್ಯಾಸಕಿ ಸಪ್ನಾ ಹಾಗೂ ಪವಿತ್ರಾ ಪ್ರಸಾದ್ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಶುಭಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ಪ್ರಶಸ್ತಿ ದೊರೆಯಿತು.