ಆಶಿಫಾ ಪ್ರಕರಣ – ಕೆ.ಸಿ ಎಫ್ ಸೌದಿ ಅರೇಬಿಯಾ, ಯುಎಇ ಖಂಡನೆ
ಸೌದಿ ಅರೇಬಿಯಾ: ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಕೆ.ಸಿ ಎಫ್ ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೆ.ಸಿ ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ರವರು ಇದೊಂದು ಅತ್ಯಂತ ಅಮಾನವೀಯ ಹೀನ ಕೃತ್ಯ ಮತ್ತು ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿದೆ. ಎಂದು ಅಭಿಪ್ರಾಯಪಟ್ಟರು. ಈ ಪೈಶಾಚಿಕ ಕೃತ್ಯವೆಸಗಿಸ ಕಾಮಪಿಪಾಸುಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಅಪರಾಧಿಗಳ ಪರ ವಾಗಿ ಪ್ರತಿಭಟನೆ ಮಾಡಿದ ಬಿ.ಜೆಪಿ ಸಂಸದರಿಬ್ಬರ ವಿರುದ್ದ ಮೊಕ್ಕದ್ದಮೆ ದಾಖಲಿಸಬೇಕೆಂದು ಕೆ.ಸಿ ಎಫ್ ಸೌದಿ ಅರೇಬಿಯಾ ಅಗ್ರಹಿಸುತ್ತದೆ ಹಾಗೂ ಕ್ರೈಮ್ ಬ್ರಾಂಚ್ ತನಿಖೆಯನ್ನು ಅಡ್ಡಿಪಡಿಸಿದ ಜಮ್ಮುವಿನ ಬಾರ್ ಅಸೋಸಿಯೇಶನ್ ವಿರುದ್ದ ಸುಪ್ರಿಮ್ ಕೋರ್ಟ್ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಕೆ.ಸಿ ಎಫ್ ಅಪೇಕ್ಷಿಸುತ್ತದೆ.
ಈ ಸಂಧರ್ಭದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಕಾರ್ಯದರ್ಶಿ ಪಾರೂಖ್ ಕಾಟಿಫಳ್ಳ ಉಪಸ್ಥಿತರಿದ್ದರು.
ಮನುಕುಲವನ್ನೇ ಬೆಚ್ಚಿಬೀಳಿಸುವಂತಹ ಆಸಿಫಾ ಹತ್ಯಾ ಪ್ರಕರಣ: ಕೆಸಿಎಫ್ ಯುಎಇ ತೀವ್ರ ಖಂಡನೆ
ದುಬೈ: ಮನುಕುಲವನ್ನೇ ಬೆಚ್ಚಿ ಬೀಳಿಸುವ ಹೃದವಿದ್ರಾವಕ ಘಟನೆಯೊಂದು ಭಾರತದ ಕಾಶ್ಮೀರದಲ್ಲಿ ನಡೆದಿರುವುದು ಖಂಡನೀಯ. ಜಮ್ಮು ಕಾಶ್ಮೀರದ ಕಾಥುವಾ ಎಂಬಲ್ಲಿ ಎಂಟು ವರ್ಷ ಪ್ರಾಯದ ಆಸಿಫಾ ಎಂಬ ಮುಗ್ದ ಬಾಲಕಿಯನ್ನು ಅಪಹರಿಸಿ ಬಾಲಾಪರಾಧಿ ಸಹಿತ ಉನ್ನತ ಪೋಲೀಸ್ ಅಧಿಕಾರಿಗಳನ್ನೊಳಗೊಂಡು ನಾಲ್ಕು ಜನರ ತಂಡವು ಏಳು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆಯು ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ.
ತನ್ನ ಗ್ರಾಮದಲ್ಲಿನ ಕಾಡು ಪ್ರದೇಶಕ್ಕೆ ಕುದುರೆಯನ್ನು ಮೇಯಿಸಲು ಹೋಗಿದ್ದ ಆಸಿಫಾಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆಗೈದ ಕಾಮ-ನರ ಪಿಶಾಚಿಗಳು ಮಾನವ ಸಮೂಹಕ್ಕೆ ಕಂಠಕ. ಪವಿತ್ರ ಆರಾಧನಾಲಯದಲ್ಲಿ ಆ ಮುಗ್ದ ಮಗುವನ್ನು ಸತತ ಏಳು ದಿನಗಳ ಕಾಲ ನಿದ್ದೆ ಮಾತ್ರೆ ನೀಡಿ , ಆಹಾರ ನೀಡದೆ ದೈಹಿಕವಾಗಿ ಕಿರುಕುಳ ನೀಡಿ ಸಾಮೂಹಿಕವಾಗಿ ಅತ್ಯಾಚಾರಗೈದು ಮೃಗೀಯವಾಗ ಕೊಲೆಗೈದ ಕಿರಾತಕರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಕೂಡಲೇ ನೇಣುಗಂಬಕ್ಕೆ ಏರಿಸಲು ಸರ್ವ ಭಾರತೀಯರ ಅಭಿಲಾಷೆಯೂ, ನ್ಯಾಯವೂ ಆಗಿದೆ.
ಈ ನಿಟ್ಟಿನಲ್ಲಿ ಕೆಸಿಎಫ್ ಯುಎಇಯು ತೀವ್ರ ಸಂತಾಪ ವ್ಯಕ್ತಪಡಿಸಿ ಆಸಿಫಾಲ ಪಾರತ್ರಿಕ ಮೋಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಆಕೆಯ ಕುಟುಂಬಕ್ಕೆ ಕ್ಷಮೆ ನೀಡಲು ಪ್ರಾರ್ಥಿಸಿ ನರ-ಕಾಮ ಪಿಶಾಚಿ ಕುಟುಕರಿಗೆ ಅತೀ ಶೀಘ್ರವಾಗಿ ಶಿಕ್ಷೆಯನ್ನು ವಿಧಿಸುವಂತಾಗಲಿ ಎಂದು ಪ್ರಾರ್ಥಿಸಿದರು.
ನರ ಹಂತಕರಿಗೆ ಸಾಥ್ ನೀಡುವ ಶಕ್ತಿಗಳನ್ನು ತರಾಟೆಗೆ ತೆಗೆದ ಕೆಸಿಎಫ್ ಯುಎಇ ಶೀಘ್ರವೇ ನರಹಂತಕರು ನೇಣುಗಂಬಕ್ಕೆ ಏರುವಂತಾಗಲಿ ಎಂದಿತು.
ಆಸಿಫಾ ಪ್ರಕರಣವು ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಪ್ರಕರಣವಾಗಿದೆ. ಇದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕೆಸಿಎಫ್ ಯುಎಇ ಆಸಿಫಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಭಾರತ ಸರಕಾರದಲ್ಲಿ ಮನವಿ ಮಾಡಿಕೊಂಡಿದೆ.