ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ

Spread the love

ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ
ಬೆಂಗಳೂರು : ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯ, ಹೃದಯವಾಹಿನಿ ಮಂಗಳೂರು, ಮತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ರಿ. ಸಂಯುಕ್ತವಾಗಿ 2 ದಿನಗಳ 13ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನವನ್ನು ಮೆಲ್ಬರ್ನ್‍ನ ಕಿಂಗ್‍ಸ್ಟನ್ ಆರ್ಟ್ ಸೆಂಟರ್ ಸಭಾಂಗಣದಲ್ಲಿ ಮಾರ್ಚ್ 11 ಮತ್ತು 12, 2017 ರಂದು ಹಮ್ಮಿಕೊಂಡಿರುತ್ತೇವೆ.

sidny-kannada-sammelana

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳುವವು. ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಆಸ್ಟ್ರೇಲಿಯಾದಲ್ಲಿ ಪ್ರತಿಬಿಂಬಿಸಲಿವೆ. ಈ ಹಿಂದೆ 2004 ಮತ್ತು 2012 ರಲ್ಲಿ ಅಬುಧಾಬಿ, 2005 ಮತ್ತು 2010 ರಲ್ಲಿ ಸಿಂಗಾಪುರ 2006 ಮತ್ತು 2011 ರಲ್ಲಿ ಬಹರೇನ್, 2007 ರಲ್ಲಿ ಕುವೈಟ್, 2008 ರಲ್ಲಿ ಕತಾರ್ 2009 ರಲ್ಲಿ ದುಬೈ, 2013 ರಲ್ಲಿ ಕೀನ್ಯಾ 2014 ರಲ್ಲಿ ಕೆನಡಾ ಹಾಗೂ 2015 ಶಾರ್ಜಾದಲ್ಲಿ ಹೀಗೆ ಅನುಕ್ರಮವಾಗಿ 12 ಸಮ್ಮೇಳನಗಳು ನಡೆದಿವೆ.
ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತುಪ್ರದರ್ಶನ, ಪುಸ್ತಕ ಮೇಳವನ್ನು ಏರ್ಪಡಿಸಲಾಗುವುದು. ಬೇಡಿಕೆಗೆ ಅನುಗುಣವಾಗಿ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗುವುದು. ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ 3000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಹೆಚ್ಚಿನ ಸಂಖ್ಯೆಯ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಲಾಗುವುದು.
2004 ರಿಂದ ಈವರೆಗೆ 2000 ಕ್ಕೂ ಹೆಚ್ಚು ಕಲಾವಿದರು, ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ವಿದೇಶಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ವೇದಿಕೆ ನೀಡಿದ ಹೆಗ್ಗಳಿಕೆ ಕರ್ನಾಟಕದ ಏಕೈಕ ಸಂಘಟನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯದ್ದಾಗಿದೆ.
ಸ್ವಾಗತ ಸಮಿತಿ : ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯ ಕಾರ್ಯಕಾರಿ ಸಮಿತಿಯು ಸಮ್ಮೇಳನದ ಸ್ವಾಗತ ಸಮಿತಿಯಾಗಿ ಕಾರ್ಯನಿರ್ವಹಿಸಲಿದೆ.
ಎರಡು ದಿನಗಳ ಸಮ್ಮೇಳನದ ಗಣ್ಯರನ್ನಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಶ್ರೀ ಟಿ.ಬಿ. ಜಯಚಂದ್ರ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀ, ವಿಧಾನ ಪರಿಷತ್ ಶಾಸಕ ಶ್ರೀ ಐವನ್ ಡಿಸೋಜಾ, ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪೆÇ್ರೀ. ಎಸ್.ಜಿ ಸಿದ್ದರಾಮಯ್ಯ, ಚಿತ್ರನಟ ರಮೇಶ್ ಅರವಿಂದ್ ಮುಂತಾದವರನ್ನು ಆಮಂತ್ರಿಸಲಾಗುವುದು.
ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 70 ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು.
ಪುಸ್ತಕ ಬಿಡುಗಡೆ : ಸಮ್ಮೇಳನದಲ್ಲಿ 2015 ಮತ್ತು 2016ರಲ್ಲಿ ಪ್ರಕಟವಾದ ಕನ್ನಡ ಕೃತಿಗಳ ಲೋಕಾರ್ಪಣೆಗೆ ಅವಕಾಶ ಇರುವುದರಿಂದ ಲೇಖಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಸಮ್ಮೇಳನಾಧ್ಯಕ್ಷರು: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿರುವ ಮಹಾನೀಯರೋರ್ವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು. ಅಖಿಲ ಭಾರತ ಕನ್ನಡ ಸಾಹಿತ್ಯ, ಪರಿಷತ್ ಸಮ್ಮೇಳನಾಧ್ಯಕ್ಷ ಸ್ಥಾನವಹಿಸಿದ್ದವರು ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷ ಸ್ಥಾನವಹಿಸಿದ್ದವರು ಮತ್ತು ಸರಕಾರಿ ಪ್ರಾಧಿಕಾರಗಳ ಅಥವಾ ಅಕಾಡೆಮಿಯ ಹಾಲಿ ಅಥವಾ ಮಾಜಿ ಅಧ್ಯಕ್ಷರು, ಜಾನಪದ ಕ್ಷೇತ್ರದ ಹಿರಿಯ ಸಾಧಕರು ಹಾಗು ವಿಶ್ವವಿದ್ಯಾನಿಲಯಗಳ ಹಾಲಿ ಅಥವಾ ವಿಶ್ರಾಂತ ಕುಲಪತಿಗಳ ಹೆಸರುಗಳನ್ನು ಮಾತ್ರ ಪರಿಗಣಿಸಲಾಗುವುದು.
ಗೌರವ ಪ್ರಶಸ್ತಿ: ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಂಗವಾಗಿ ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರು. ಸಾಹಿತಿಗಳು, ವೈದ್ಯರು, ತಂತ್ರಜ್ಞರು ಹಾಗೂ ಸಮಾಜ ಸೇವಕರಿಗೆ ವಿಶ್ವಮಾನ್ಯರು-2015 ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸಮ್ಮೇಳನದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು.
ಸಮ್ಮೇಳನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು, ಸಾಹಿತಿಗಳು ಹಾಗೂ ಪ್ರಶಸ್ತಿ ಹಾಗೂ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಹೆಸರು ಸೂಚಿಸುವವರು “ಹೃದಯವಾಹಿನಿ, ಮಂಜುನಾಥ್ ಅಸೋಸಿಯೇಟ್ಸ್, ರಘು ಬಿಲ್ಡಿಂಗ್ ಉರ್ವಸ್ಟೋರ್ ಮಂಗಳೂರು -575006” ಈ ವಿಳಾಸಕ್ಕೆ ನವೆಂಬರ್ 30 ರೊಳಗೆ ವಿವರಗಳನ್ನು ಕಳುಹಿಸಬಹುದು. ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 0824-4281531, 988651008793 hrudayavahini@rediffmail.com .


Spread the love