ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ

Spread the love

ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಯೋಗಿ ಕರ್ನಾಟಕದಲ್ಲಿ ಬಂದು ಸಾಧಿಸುವುದೇನಿದೆ; ಎಚ್ಡಿಕೆ ಪ್ರಶ್ನೆ

ಮಂಗಳೂರು: ಉತ್ತರಪ್ರದೇಶದ ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಮುಖ್ಯಮಂತ್ರಿ ಯೋಗಿಯ ಭಾಷಣದಿಂದ  ಬಿಜೆಪಿ ಏನನ್ನು ಸಾಧಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕಕ್ಕೆ ಯೋಗಿಯನ್ನು ಕರೆದು ತರುತ್ತಿರುವುದು ಕಂಡರೆ ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದ್ದಂತೆ ಕಾಣುತ್ತದೆ. ಅಧಿಕಾರ ಸಿಕ್ಕಿದಾಗ ಚೆಕ್ ಮೂಲಕ ಲಂಚ ಪಡೆದು, ಅಧಿವೇಶನದಲ್ಲಿ ಅಶ್ಲೀಲ. ಚಿತ್ರ ನೋಡಿ ರಾಜ್ಯದಲ್ಲಿ ಭೋಗ ಮಾಡಿದ್ದಾರೆ. ಇಲ್ಲಿ ಭೋಗಿಗಳು ಇರುವುದರಿಂದ ಅವರ ಮೇಲೆ ವಿಶ್ವಾಸವಿಲ್ಲದೆ ಉತ್ತರ ಪ್ರದೇಶದಿಂದ ಯೋಗಿಯನ್ನು ಕರೆಸಲಾಗುತ್ತಿದೆ ಎಂದು ಅವರು ಲೇವಡಿ ಮಾಡಿದರು.

ರಾಜಕೀಯ ತೆವಲಿಗಾಗಿ ಹಿಂದು ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆ‌. ಕರಾವಳಿ ಭಾಗದ ಜನರ ಜತೆ ಚೆಲ್ಲಾಟ ನಡೆಸುವವರಿಗೆ ಬೆಂಬಲ‌ ನೀಡುವುದು ಸರಿಯಲ್ಲ ಎಂದು ಅವರು ಹೇಳುದರು.

ಜೆಡಿಎಸ್ ಸೌಹಾರ್ದ ಯಾತ್ರೆ ಮಾಡಿದರೆ ಅನುಮತಿ ಕೊಡದ ಇಲ್ಲಿಯ ಅಧಿಕಾರಿಗಳಿಗೆ ಮೂರೇ ತಿಂಗಳ ಅವಕಾಶ. ಅಮಾಯಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ರಾಜಕ ಪಕ್ಷಗಳ‌ ಏಜೆಂಟ್ ಆಗಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲ ವಿಚಾರದಲ್ಲಿ ಜೆಡಿಎಸ್ ಬೆಂಬಲ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದರು.

ಕರಾವಳಿಯಲ್ಲಿ ಕಾಂಗ್ರೆಸ್- ಬಿಜೆಪಿ ಅಭಿವೃದ್ಧಿ ವಿಷಯಗಳಿಗೆ ಮಹತ್ವ ನೀಡದೆ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ವಾಮಮಾರ್ಗದಲ್ಲಿ ಹೋಗುತ್ತಿವೆ ಮಾಜಿ ಮುಖ್ಯಮಂತ್ರಿ ಎಚ್.ಡಿ‌ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯು ಕಾಂಗ್ರೆಸ್ ಅಧಿಕಾರ ಬಂದ ನಂತರ ಹಿಂದುಗಳ ರಕ್ಷಣೆಯಿಲ್ಲ ಎಂದು ಆಪಾದಿಸುತ್ತಿದೆ. ಕೊಲೆಯಾದವರ ಪಟ್ಟಿ ಮಾಡುತ್ತಾ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಗೃಹಸಚಿವರು ಹಿಂದು- ಮುಸ್ಲಿಂ ಅಮಾಯಕರ ಹತ್ಯೆ ಪಟ್ಟಿ ನೀಡಿದ್ದಾರೆ ಎಂದು ತಿಳಿಸಿದರು.

ಈ ಎರಡು ಪಕ್ಷಗಳಿಂದ ಕರಾವಳಿ ಜನರು ಆತಂಕದಲ್ಲಿದ್ದಾರೆ. ಬೆಳಿಗ್ಗೆ ಮನೆಯಿಂದ ಹೊರಟವರು ಮನೆಗೆ ವಾಪಾಸು ಬರುವ ಬಗ್ಗೆ ಅನುಮಾನ ಕಾಡುತ್ತಿದೆ ಎಂದರು.


Spread the love