ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಪ್ರವಾಸ
ಮಂಗಳೂರು : ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ.
ಅಕ್ಟೋಬರ್ 3 ರಂದು ಪೂರ್ವಾಹ್ನ 9.30 ಗಂಟೆಗೆ ಮಂಗಳೂರಿಗೆ ಆಗಮಿಸಿ ಸುಳ್ಯ ತಾಲೂಕಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ನೂತನ ಶಾಲಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 10 ಗಂಟೆಗೆ ಪೇರಡ್ಕ ಮಸೀದಿ ವಠಾರ ಸಂಪಾಜೆ ಇಲ್ಲಿ ಟಿ.ಎಂ ಶಹೀದ್ ಮತ್ತು ಕುಟುಂಬದವರು ದಾನವಾಗಿ ನಿರ್ಮಿಸಿರುವ ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ತಖ್ವೀಯತ್ತುಲ್ ಇಸ್ಲಾಂ ಮದರಸ ಕಟ್ಟಡವನ್ನು ವಕ್ಫ್‍ಗೆ ಹಸ್ತಾಂತರ ಸಮಾರಂಭ ಹಾಗೂ ನೂತನ ಸಮುದಾಯ ಭವನದ ಕಟ್ಟಡದ ಶಿಲಾನ್ಯಾಸ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಇಂಟರ್‍ಲಾಕ್‍ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 11 ಗಂಟೆಗೆ ತಾಲೂಕು ತಹಶೀಲ್ದಾರರು ಹಾಗೂ ಆಹಾರ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ. 11.30 ಗಂಟೆಗೆ ಸುಳ್ಯ ತಾಲೂಕಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇವರ ವತಿಯಿಂದ ಕೊಡಗಿನ ಜೋಡುಪಾಲ ನೆರೆ ಸಂತ್ರಸ್ತರನ್ನು ರಕ್ಷಿಸಿದ ಯುವಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಆರಂತೋಡು ಅನ್ವಾರುಲ್ ಹುದಾ ಸಮುದಾಯ ಭವನದಲ್ಲಿ ಬದ್ರಿಯಾ ಜುಮಾ ಮಸೀದಿ ಆರಂತೋಡು ಮತ್ತು ಆನ್ವಾರುಲ್ ಹುದಾ ಯಂಗ್‍ಮೆನ್ಸ್ ಆಸೋಸಿಯೇಶನ್(ರಿ) ಆರಂತೋಡು ಇದರ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಮೊಗರ್ಪಣೆ ದರ್ಗಾ ಶರೀಪ್ ಮು0ಭಾಗ, ಸುಳ್ಯ ಅತ್ಯಾಧುನಿಕ ಶಾದಿ ಮಹಲ್ ನೂತನ ಶ0ಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಮಧ್ಯಾಹ್ನ 3.00 ಗ0ಟೆಗೆ ಅನ್ಸಾರಿಯಾ ಯತೀ0ಖಾನ, ಜಟ್ಟಿಪಳ್ಳ ರಸ್ತೆ, ಸುಳ್ಯ ತಾಲೂಕಿನ ಮಸೀದಿ,ಮದರಸಗಳ ಪದಾಧಿಕಾರಿಗಳ ಮತ್ತು ಇಮಾಮ ವಕ್ವ್ ಸ0ಸ್ಥೆಗಳ ಮುತವಲ್ಲಿ ಸಮಾವೇಶದಲ್ಲಿ ಭಾಗವಹಿಸುವರು. ಸ0ಜೆ 5 ಕ್ಕೆ ಸುಳ್ಯದಿ0ದ ದ.ಕ ಜಿಲ್ಲೆಗೆ ನಿರ್ಗಮಿಸುವರು.