ಮಂಗಳೂರು: ಶಿಕ್ಷಣ, ಸಮಾಜ ಸೇವೆ ಮತ್ತು ಧಾರ್ಮಿಕ ಕ್ಷೇತ್ರದ ಅನನ್ಯ ಸಾಧಕರಾದ ಉದ್ಯಮಿ ಎ.ಜೆ. ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಉಪಾಧಿ ಲಭಿಸಿದ ಪ್ರಯುಕ್ತ ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ, ನಗರದ ಬಲ್ಮಠದಲ್ಲಿರುವ ಕುಡ್ಲ ಪೆವಿಲಿಯನ್‍ನಲ್ಲಿ ಮಂಗಳವಾರ ಸಾಯಂಕಾಲ ಗಂ. 5.30ಕ್ಕೆ ಸನ್ಮಾನ ಸಮಾರಂಭ ಜರಗಲಿದೆ.
ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಸನ್ಮಾನಿಸುವರು. ರವೀಂದ್ರನಾಥ ಜಿ. ಹೆಗ್ಡೆ ಪಡುಬಿದ್ರಿ, ಶೆಡ್ಡೆ ಮಂಜುನಾಥ ಭಂಡಾರಿ, ಸವಣೂರು ಸೀತಾರಾಮ ರೈ, ಜಯಕರ ಶೆಟ್ಟಿ ಇಂದ್ರಾಳಿ, ಕೋಲಾರ್ ಸತೀಶ್ಚಂದ್ರ ಭಂಡಾರಿ, ಸುಧೀರ್ ಹೆಗ್ಡೆ ಕಾರ್ಕಳ, ರಘುರಾಮ ಶೆಟ್ಟಿ ಬೆಳ್ತಂಗಡಿ, ಅಭಿನಂದನ್ ಶೆಟ್ಟಿ ಕುಂದಾಪುರ ಅತಿಥಿಗಳಾಗಿರುವರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಲೋಕಸಭಾ ಸದಸ್ಯ ನಳಿನ್‍ಕುಮಾರ್ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಡಾ. ಮಂಜುನಾಥ ಭಂಡಾರಿ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.
ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ (ರಿ) ಕಛೇರಿಯಲ್ಲಿ ಈ ಬಗ್ಗೆ ಜರಗಿದ ಕಾರ್ಯಕಾರಿಣಿ ಸಭೆಯಲ್ಲಿ ಡಾ. ಎ.ಜೆ. ಶೆಟ್ಟಿ ಹಾಗೂ ಶಾರದಾ ಎ.ಜೆ ಶೆಟ್ಟಿಯವರನ್ನು ಜತೆಯಾಗಿ ಸನ್ಮಾನಿಸಲು ನಿರ್ಧರಿಸಲಾಯಿತು. ಟ್ರಸ್ಟ್ ಚೇಯರ್‍ಮೆನ್ ಎ. ಸದಾನಂದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಾಶಯ ತ್ರೈಮಾಸಿಕದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ, ಸಂಪಾದಕ ಕದ್ರಿ ನವನೀತ್ ಶೆಟ್ಟಿ, ಪದಾಧಿಕಾರಿಗಳಾದ ಜೆ. ಶಶಿಧರ ಶೆಟ್ಟಿ, ರಾಜ್‍ಗೋಪಾಲ್ ರೈ, ದೇವಿಚರಣ್ ಶೆಟ್ಟಿ, ಬಿ. ಪುಷ್ಪಕರ ಶೆಟ್ಟಿ, ಸಿ.ಎಸ್ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ಎ. ಕೃಷ್ಣ ಶೆಟ್ಟಿ ತಾರೆಮಾರು, ವಿಜಯಲಕ್ಷ್ಮೀ ಬಿ. ಶೆಟ್ಟಿ, ಸುಪ್ರೀತಾ ಜಿ. ಶೆಟ್ಟಿ, ಎಸ್. ಮದಲಾಕ್ಷಿ ರೈ ಸಲಹೆ ಸೂಚನೆ ನೀಡಿದರು