ಇಂಡಿಯನ್ ಕ್ಯಾನ್ಸರ್ ಸೊಸೈಟಿ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ಪರಿಶೀಲನ ಶಿಬಿರಗಳನ್ನು ನಡೆಸುತ್ತಿದೆ.
ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಎ ಜೆ ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಹಯೋಗದೊಂದಿಗೆ ಎ ಜೆ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಮಾಹಿತಿ ಮತ್ತು ಪರಿಶೀಲನ ಶಿಬಿರವನ್ನು 4 ರಿಂದ 9 ಫೆಬ್ರುವರಿ, 2019 ರವರೆಗೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೋಂದಾವಣೆ ಹಾಗೂ ವೈದ್ಯರೊಂದಿಗಿನ ಸಂದರ್ಶನ ಉಚಿತ, ತಲೆ, ಕತ್ತಿನ ಹಾಗೂ ಬಾಯಿಯ ತಪಾಸಣೆ ಉಚಿತ, ಮಹಿಳೆಯರಿಗೆ ಪ್ಯಾಫ಼್ ಸ್ಮಿಯರ್ ತಪಾಸಣೆ ಉಚಿತ, ಹೊರ ರೋಗಿ ತಪಾಸಣೆಗಳಿಗೆ 25% ರಿಯಾಯಿತಿ ಹಾಗೂ ಒಳರೋಗಿ ಚಿಕಿತ್ಸೆಯಲ್ಲಿ ರಿಯಾಯಿತಿ ನೀಡಲಾಗಿತ್ತು. ಸುಮಾರು 108 ಜನರನ್ನು ಶಿಬಿರದಲ್ಲಿ ತಪಸಾಣೆಗೊಳಪಡಿಸಲಾಯಿತು.
ಮೆದುಳು, ಸ್ತನ, ಅನ್ನನಾಳ, ಯಕೃತ್ತು, ಶ್ವಾಸಕೋಶ, ಶಿಶ್ನ, ಸಿಗ್ಮೋಯ್ಡ್ ಕೊಲೊನ್ ಮತ್ತು ನಾಲಿಗೆ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ರೋಗಿಗಳನ್ನು ಗುರುತಿಸಲಾಗಿದೆ ಮತ್ತು ಈ ರೋಗಿಗಳ ಚಿಕಿತ್ಸೆ ಎ ಜೆ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಮುಂದುವರಿಯುತ್ತದೆ.
ಸಮಾಜದ ಆರ್ಥಿಕ ದುರ್ಬಲ ವರ್ಗದಿಂದ ಗುರುತಿಸಲ್ಪಟ್ಟ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಭಾರತೀಯ ಕ್ಯಾನ್ಸರ್ ಸೊಸೈಟಿಯು ದೇಣಿಗೆ ನೀಡಿದೆ. ಇಂಡಿಯನ್ ಕ್ಯಾನ್ಸರ್ ಸೊಸೈಟಿಯಿಂದ ಪಡೆದ ದೇಣಿಗೆ ಎ ಜೆ ಕ್ಯಾನ್ಸರ್ ಫೌಂಡೇಶನ್ನಿನ ಅಗತ್ಯವಾದವರಿಗೆ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ಪ್ರಯತ್ನಗಳನ್ನು ಬಲಪಡಿಸುತ್ತದೆ.