ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ – ದೇವರಾಜ್ ಶೆಟ್ಟಿಗಾರ್

Spread the love

ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ – ದೇವರಾಜ್ ಶೆಟ್ಟಿಗಾರ್

ಉಡುಪಿ: ಇಂದಿನ ಯುವಕರಿಗೆ ಸಾಮಾಜಿಕವಾಗಿ ಬೆಳೆಯಲು ಅವರೆದುರು ಒಳ್ಳೆಯ ಮಾದರಿಗಳೇ ಇಲ್ಲ. ಹಾಗಾಗಿ ಯಾರ್ಯಾರನ್ನು ಮಾದರಿಗಳನ್ನಾಗಿ ಇಟ್ಟು ಕೊಂಡು ಸಾಮಾಜಿಕವಾಗಿ ಬೆಳೆಯಲು ಪ್ರಯತ್ನಿಸಿ ಅದಲ್ಲಿ ವಿಫಲರಾಗುತ್ತಾರೆ. ಸಾಮಾಜಿಕವಾಗಿ ಬೆಳೆಯುವ ಯುವಕರಿಗೆ ಒಳ್ಳೆಯ ಮಾದರಿ ಮಂಜುನಾಥ ಉದ್ಯಾವರ್ ಆಗಿದ್ದರು. ಅವರ ನೆರಳಲ್ಲಿ ಎಷ್ಟೋ ಜನ ಯುವಕರು ನಾಯಕರಾಗಿ ಬೆಳೆದಿದ್ದಾರೆ. ಅವರ ನೆನಪಿನಲ್ಲಿ ಮಾಡುವ ಈ ರಕ್ತದಾನ ಶಿಬಿರ ಸಮಾಜ ಸೇವೆಗೆ ಒಂದು ಸಂಕೇತ. ಇದಕ್ಕಿಂತ ಭಿನ್ನವಾಗಿ ಅವರ ನೆನಪನ್ನು ಮಾಡಲು ಸಾದ್ಯವಿಲ್ಲ ಎಂದು ಉಡುಪಿ ನ್ಯಾಯವಾದಿಗಳಾದ ದೇವರಾಜ ಶೆಟ್ಟಿಗಾರ ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜುನಾಥ ಉದ್ಯಾವರ ಐದನೇ ಪುಣ್ಯ ತಿಥಿಯ ಅಂUವಾಗಿ ಜಿಲ್ಲಾ ಆಸ್ಪತ್ರೆಯ ಸಯೋಗದಲ್ಲಿ ಜರಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ನುಡಿದರು.

ಅವರು ಮುಂದುವರಿಯುತ್ತಾ ಉನ್ನತ ಹುದ್ದೆಯಲ್ಲಿ ಇದ್ದರೂ ಮಂಜುನಾಥ್ ಉದ್ಯಾವರ್‍ರವರು ತುಂಬಾ ಸರಳರಾಗಿದ್ದರು. ಸದಾ ಬಡವರ ಪರವಾಗಿ ಮಿಡಿಯುತ್ತಿದ್ದರು. ನನ್ನ ಬೆಳವಣಿಗೆಯಲ್ಲೂ ಮಹತ್ತರವಾದ ಪಾತ್ರ ವಹಿಸಿದ್ದರು. ಅವರು ನಡೆದ ದಾರಿ ನಮಗೆಲ್ಲ ಮಾದರಿಯಾಗಲಿ ಎಂದವರು ಭಾವುಕವಾಗಿ vನ್ನ ಮತ್ತು ಮಂಜುನಾಥ್ ಉದ್ಯಾವರವರ ಸಂಬಂಧವನ್ನು ವಿವರಿಸಿದರು

ಅದ್ಯಕ್ಷತೆ ವಹಿಸಿದ ಸಂಸ್ಥೆಯ ನಿರ್ದೇಶಕರಾದ ಉದ್ಯಾವರ ನಾಗೇಶ ಕುಮಾರ್ ಅವರು ಕಾಲವಾಗಿ ಐದು ವರುಷ ಸಂದರರೂ ಇಂದೂ ಕೂಡ ಜನರು ಅವರ ಬಗ್ಗೆ ಮಾತನಾಡುವಾಗ ಗದ್ಗತಿತರಾಗುತ್ತಾರೆ . ಇದು ಅವರು ಬದುಕಿದ ಪರಿಯನ್ನು ತೋರಿಸುತ್ತದೆ. ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಸ್ಥಾಪನೆಯಲ್ಲಿ ಮಹತ್ತರವಾದ ಪಾತ್ರವಹಿಸಿದ ಉದ್ಯಾವರರ ನೆನಪಲ್ಲಿ  ರಕ್ತದಾನ ಶಿಬಿರ ಏರ್ಪಡಿಸುತ್ತಿರುವ ಮೂಲಕ ಅವರ ಜನ ಸೇವೆಗೆ ಹೊಸ ಭಾಷ್ಯವನ್ನು ಇಲ್ಲಿ ಬರೆಯಲಾಗುತ್ತದೆ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯ ಮುಖ್ಯಸ್ಥರಾದ ಡಾ. ವೀಣಾ ಕುಮಾರಿ ರಕ್ತದಾನದ ಮಹತ್ವ ಮತ್ತು ಕ್ರಮ ನಿಭಂದನೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷರಾದ  ರಿಯಾಝ್ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು.ಆರ್.ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲಿಯಾನ್ ವಂದಿಸಿದರು.ಹಿರಿಯ ಸದಸ್ಯ ಅನುಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಈ ರಕ್ತದಾನ ಶಿಬಿರದಲ್ಲಿ 80 ಯುನಿಟ್ ರಕ್ತ ಸಂಗ್ರಹಿಸಲಾಯಿತು.


Spread the love