ಇಂದಿರಾಗಾಂಧಿ ವಿಶ್ವದ ಅತ್ಯಂತ ಬಲಶಾಲಿ ನಾಯಕಿ: ಅಶೋಕ್ ಕೊಡವೂರು
ಉಡುಪಿ: ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿಯಾಗಿದ್ದರೂ ಇಡೀ ವಿಶ್ವದ ಅತ್ಯಂತ ಬಲಶಾಲಿ ನಾಯಕಿಯಾಗಿದ್ದರು. ಅವರ ಧೈರ್ಯ, ಸ್ಥೈರ್ಯ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿತ್ವದಿಂದಾಗಿ ಅವರು ತಮ್ಮ ಆಡಳಿ ತಾವಧಿಯಲ್ಲಿ ಜಾರಿಗೆ ತಂದಿದ್ದ ಅನೇಕ ಜನಪರ ಹಾಗೂ ಕ್ರಾಂತಿಕಾರಿ ಯೋಜನೆಗಳು ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ರಾಷ್ಟ್ರಗಳನ್ನೂ ಬೆರಗುಗೊಳಿಸುವಂತೆ ಮಾಡಿದ್ದವು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಇಂದು ನಡೆದ ದಿ.ಇಂದಿರಾ ಗಾಂಧಿ ಅವರ ಪುಣ್ಯತಿಥಿ ಆಚರಣೆಯ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕೆಪಿಸಿಸಿ ಪ್ರಧಾನಿಯ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಈ ದೇಶಕ್ಕೆ ದಿವಂಗತ ಇಂದಿರಾಗಾಂಧಿ ಅವರ ವಿಚಾರಧಾರೆಗಳು, ಅವರು ಈ ದೇಶದ ಬಡವರಿಗಾಗಿ ಕೈಗೊಂಡ ಅನೇಕ ಯೋಜನೆಗಳು ಇಂದು ಅತೀ ಅಗತ್ಯವಾಗಿದೆ ಎನ್ನುವ ಅರಿವು ನಮಗಾಗುತ್ತದೆ. ಇಂದಿರಾ ಗಾಂಧಿ ಒಂದು ವ್ಯಕ್ತಿಯಲ್ಲ. ಒಂದು ಶಕ್ತಿ ಎನ್ನುವ ಮಾತು ಸಾರ್ವ ಕಾಲಿಕ ಸತ್ಯ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ವೆರೋನಿಕಾ ಕರ್ನೇಲಿಯೋ ನುಡಿನಮನಗಳನ್ನು ಸಲ್ಲಿಸಿದರು. ಇದೇ ಸಂದರ್ಭ ದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೂ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಹಬೀಬ್ ಅಲಿ, ಕುಶಲ ಶೆಟ್ಟಿ, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಟಿ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಶಾಲಿನಿ ಪುರಂದರ್, ಸುಕನ್ಯಾ ಪೂಜಾರಿ ಕಡೇಕಾರ್, ಹಿರಿಯ ನಾಯಕಿ ಲಕ್ಷ್ಮೀ ಭಟ್, ರಮಾದೇವಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷೆ ರೋಶನಿ ಒಲಿವರ್, ಮಾರ್ಗ ರೇಟ್ ಸೀಮಾ ಡಿಸೋಜ,ಕುರ್ಕಾಲು, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಸಂಧ್ಯಾ ತಿಲಕ್ ರಾಜ್, ಅರ್ಚನಾ ದೇವಾಡಿಗ, ಪ್ರಮೀಳಾ ಸುವರ್ಣ, ಸತೀಶ್ ಕೊಡವೂರು,ನಾಗೇಶ್ ಕುಮಾರ್ ಉದ್ಯಾವರ, ಗಣೇಶ್ ಕೋಟ್ಯಾನ್ ಉಡುಪಿ, ಮೊಹಮ್ಮದ್ ಶೀಶ್, ರಮಾನಂದ ಪೈ, ಶೇಖ್ ವಾಯ್ಝ್, ಅಹಮದ್, ಸುರೇಶ್ ಶೆಟ್ಟಿ, ಬನ್ನಂಜೆ, ಜಿತೇಶ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಜ್ಯೋತಿ ಹೆಬ್ಬಾರ್ ವಂದಿಸಿದರು.