Home Mangalorean News Kannada News ಇಂದಿರಾ ಗಾಂಧಿ ಕ್ಯಾಂಟೀನ್‍ಗೆ ಚಾಲನೆ 

ಇಂದಿರಾ ಗಾಂಧಿ ಕ್ಯಾಂಟೀನ್‍ಗೆ ಚಾಲನೆ 

Spread the love

ಇಂದಿರಾ ಗಾಂಧಿ ಕ್ಯಾಂಟೀನ್‍ಗೆ ಚಾಲನೆ 

ಮಂಗಳೂರು: ಮುಖ್ಯ ಮಂತ್ರಿಗಳ ಹಸಿವು ಮುಕ್ತ ಕರ್ನಾಟಕದವನ್ನಾಗಿಸುವ ಪ್ರಮುಖ ಯೋಜನೆಯಾದ ಅನ್ನಭಾಗ್ಯ  ಯೋಜನೆನ್ನು ಇಡೀ ದೇಶದಲ್ಲೆ ಪ್ರಪ್ರಥಮವಾಗಿ ತರುವಂತಹ ಕಾರ್ಯ ಇಂದು ಸಂಪನ್ನಗೊಂಡಿತು. ಅನ್ನಭಾಗ್ಯ ಯೋಜನೆಯು  ರಾಜ್ಯದ ಪ್ರತಿ ಕುಟುಂಬದ ಜನರ ಸ್ವಾಭಿಮಾನದ  ಮತ್ತು ನೆಮ್ಮದಿಯನ್ನು ನೀಡುವ ಪೂರಕಾವಾದ ಯೊಜನೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ನಗರದ ನೆಹರು ಮೈದಾನ ಲೇಡಿಗೋಶನ್ ಆಸ್ಪತ್ರೆ ಎದುರು ಇಂದಿರಾ ಕ್ಯಾಂಟೀನ್‍ನ್ನು ಉದ್ಘಾಟಿಸಿ ಮಾತ್ತಾನಾಡಿದರು. ಇಂದಿರಾ ಕ್ಯಾಂಟಿನ್ ಮುಖ್ಯಮಂತ್ರಿಗಳ ಕನಸಿನ ಯೋಜನೆಯಾಗಿದೆ.. ದ.ಕ ಜಿಲ್ಲೆಯಲ್ಲಿ ಮತ್ತು ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಪ್ರಥಮ ಇಂದಿರಾ ಕ್ಯಾಂಟೀನ್ ಇದಾಗಿದೆ. ಬೆಳಿಗ್ಗೆ 8 ಗಂಟೆಗೆಯಿಂದ ಕೆಲಸ ಮಾಡುವ ಕೂಲಿಕಾರ್ಮಿಕರಿರುತ್ತಾರೆ. ಮೀನುಗಾರರು, ಲೋಡಿಂಗ್, ವಾಹನಚಾಲಕರು, ಬೀದಿ ಬದಿ ವ್ಯಾಪರಸ್ಥರು ಮತ್ತು ಹತ್ತಿರದ ಕಾಲೇಜು ವಿದ್ಯಾರ್ಥಿಗಳಿಗೆ, ಶ್ರಮಿಸುವ ಶ್ರಮಜೀವಿಗಳಿಗೆ ಇರುವಂತಹ ಪ್ರದೇಶದಲ್ಲಿ ಇಂದಿರಾ ಗಾಂಧಿ ಕ್ಯಾಂಟಿನ್ ಆರಂಭವಾಗಿರುವುದು ಹರ್ಷದ ವಿಷಯವಾಗಿದೆ ಎಂದು ಸಚಿವರು ಹೇಳಿದರು.

ಕರ್ನಾಟಕದ ಉದ್ದಗಲಕ್ಕೂ ಸ್ವಾಭಿಮಾನದ ಗಂಜಿ ಊಟ ಮಾಡಬೇಕು ಒಂದು ಹೊತ್ತಿನ ಊಟಕ್ಕೂ ಇನ್ನೋಬ್ಬರಲ್ಲಿ ಕೈ ಚಾಚುವಂತಾಗಬಾರದು. ಕಾಲೇಜಿಗೆ ಬರುವಂತಹ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದ್ದು ಅಂತಹವರಿಗೆ ಇಂದಿರಾ ಕ್ಯಾಂಟೀನ್ ಅನುಕೂಲವಾಗಲಿದೆ.      ಬೀದಿ ಬದಿ ವ್ಯಾಪರಸ್ಥರು ಮತ್ತು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಅನುಕೂಲವಾಗಲಿದೆ. ಹೊರಗಡೆ ಊಟಕ್ಕೆ ರೂ. 60 ಖರ್ಚುಮಾಡುವ ಸಾಮಥ್ರ್ಯ ಇಲ್ಲದಿರುವ ಪರಿಸ್ಥಿತಿ ಇದೆ. ಹಸಿದ ಹೊಟ್ಟೆಯಿಂದ ಕೆಲಸ, ಶಿಕ್ಷಣ ಸಾಧ್ಯವಿಲ್ಲ. ಬಡವರು ಶ್ರೀಮಂತರು ಒಟ್ಟಿಗೆ ಊಟಮಾಡುವಂತಹ ಕ್ಯಾಂಟಿನ್ ಇದಾಗಿದೆ ಎಂದರು.

ಜಿಲ್ಲೆಯಲ್ಲಿ ನಾಲ್ಕು ಕಡೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಆರಂಭಗೊಳ್ಳಲಿದೆ. ಹೊಬಳಿಮಟ್ಟದಲ್ಲಿ ಉಳ್ಳಾಲದಲ್ಲಿ ಇಂದಿರಾ ಗಾಂಧಿ ಕ್ಯಾಂಟಿನ್ ಆರಂಭವಾಗಲಿದೆ. ಆಹಾರದ ಗುಣಮಟ್ಟ ಮತ್ತು ಆಹಾರದ ಪ್ರಮಾಣದಲ್ಲಿ ಯಾವುದೇ ರಾಜಿ ಇಲ್ಲ. ಇದಕ್ಕೆ ಶೀಘ್ರದಲ್ಲಿಯೇ ಆಹಾರ ಸುರಕ್ಷತಾ  ಅಧಿಕಾರಿಗಳ ತಂಡವನ್ನು ರಚಿಸಲಾಗುವುದು. ಅಧಿಕಾರಿಗಳು ಆಗಾಗ್ಗೆ ಬಂದು ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಲಾಗುವುದು. ಮೂರು ಹೊತ್ತು  ಊಟು ಉಪಚಾರ ನೀಡುವ ಏಕೈಕ ಕ್ಯಾಂಟೀನ್ ಇಂದಿರಾ ಕ್ಯಾಂಟೀನ್ ಇದಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಇಂದಿರಾ ಕ್ಯಾಂಟೀನ್ ಯೋಜನೆಯು  ಒಂದು ಕ್ರಾಂತಿಯಾಗಿದೆ. ಸಾಕಷ್ಟು ಮಂದಿಗೆ ಪ್ರಯೋಜನ ಪಡೆಯಲಿದ್ದಾರೆ. ದೂರದ ಊರಿನಿಂದ ಬರುವರಿಗೂ ಪ್ರಯೋಜನವಾಗಲಿದೆ. ಪ್ರತಿಯೊಬ್ಬ ಬಡವರು ಇದರ ಪ್ರಯೋಜನ ಪಡೆಯುವಂತಾಗಬೇಕು. ಮಂಗಳೂರು ಮಹಾನಗರ ಪಾಲಿಕೆ ಮತ್ತು ಸುತ್ತ ಮುತ್ತಲಿನ ಜನರು ಸ್ವಚ್ಚತೆಯ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಜನಸಾಮಾನ್ಯರು ರೂ. 5 ತಿಂಡಿ ಮತ್ತು ರೂ. 10 ಊಟದ ಬಗ್ಗೆ ಕನಸು ಕಂಡಿರಲಿಲ್ಲ. ಇಂದಿರಾ ಗಾಂಧಿ ಹೆಸರಲ್ಲಿ ಬಡವರಿಗೆ ಊಟ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನ ಪರಿಷತ್ತು ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು.

ಇಂದಿರಾ ಗಾಂಧಿಯವರು ಬಡವರ ಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು ಆದರಿಂದ ಅವರ ಹೆಸರಲ್ಲಿ ಅವರ ನೆನಪಿಗಾಗಿ ಬಡವರ ಹಸಿವೆಯನ್ನು ನೀಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಜೆ.ಆರ್ ಲೋಬೋ ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಕವಿತಾ ಸನಿಲ್, ಮಂಗಳೂರು ನಗಾರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಂಗಳೂರು ಮಹಾನಗರ ಪಾಲಿಕೆ ಉಪ ಮಹಾಪೌರರು ರಜನೀಶ್,ಮಂಗಳೂರು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಎಂ.ಶಶಿಧರ್ ಹೆಗ್ಡೆ, ಗೇರು ಕೃಷಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಬಿ.ಹೆಚ್. ಖಾದರ್  ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version