ಇಂದಿರಾ ಗಾಂಧಿ ಜನ್ಮದಿನದ ಪ್ರಯುಕ್ತ ಕಾಪು ಯುವ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ

Spread the love

ಇಂದಿರಾ ಗಾಂಧಿ ಜನ್ಮದಿನದ ಪ್ರಯುಕ್ತ ಕಾಪು ಯುವ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಯರಿಗೆ ಸೀರೆ ವಿತರಣೆ

ಉಡುಪಿ: ಕಾಪು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 101 ನೇ ಜನ್ಮದಿನೋತ್ಸವದ ಪ್ರಯುಕ್ತ ಶಿರ್ವ ತುಪ್ಪೆಪಾದೆ ಕಾಲೊನಿಯ ಮಹಿಳೆಯರಿಗೆ ಸೀರೆ ವಿತರಣೆ ಹಾಗೂ ಹಾಗೂ ಜನ್ಮದಿನೋತ್ಸವ ಆಚರಣೆ ಕಾರ್ಯಕ್ರಮವು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಶಿರ್ವ ತುಪ್ಪೆಪಾದೆ ಕಾಲೊನಿಯಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್ರವರು ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಸೇವೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಗಾಂಧಿಯವರ ಭಾವ ಚಿತ್ರಕ್ಕೆ ಪುಷ್ಪ್ಪಾರ್ಚನೆಯನ್ನು ಮಾಡಿ ಮಾತನಾಡಿದ

ಮುಖ್ಯ ಅತಿಥಿ ಎಐಸಿಸಿ ಸದಸ್ಯರೂ, ಕಾಂಗ್ರೆಸ್ನ ಯುವ ನಾಯಕರಾದ ಅಮೃತ್ ಶೆಣೈಯವರು ಇಂದಿರಾ ಗಾಂಧಿಯವರು ತನ್ನ ಜೀವಕ್ಕೆ ಅಪಾಯ ಇದ್ದರೂ ಕೂಡಾ ಅವರ ಜಾತ್ಯತೀತ ನಿಲುವಿಗೆ ಯಾವುದೇ ಧಕ್ಕೆಯಾಗಬಾರದೆಂಬ ಕಾರಣಕ್ಕೆ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಧೀರ ಮಹಿಳೆ ಎಂದು ಗುಣಗಾನ ಮಾಡಿದರು. ಬ್ಯಾಂಕ್ ರಾಷ್ತ್ರೀಕರಣ, ಭೂ ಸುಧಾರಣಾ ಕಾಯ್ದೆ, 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ. ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್ನಲ್ಲಿ ಇಂದಿರಾ ಗಾಂಧಿಯವರನ್ನು ಈ ದೇಶದ ದುರ್ಗಾ ದೇವಿಯೆಂದು ಹಾಡಿ ಹೊಗಳಿದ್ದರು. ಇಂದಿರಾ ಗಾಂಧಿಯವರು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದವರು ಅವರನ್ನು ನೆನಪಿಸುವುದು ನಮ್ಮ ಕರ್ತವ್ಯ ಹಾಗೂ ಇವತ್ತು ನಮ್ಮ ದೇಶ ಇಷ್ಟೊಂದು ಅಭಿವೃದ್ಧಿ ಹೊಂದಲು ನೆಹರೂ ಕುಟುಂಬದವರು ಮಾಡಿದ ಸೇವೆ, ತ್ಯಾಗವೇ ಕಾರಣ ಎಂದು ತಿಳಿಸಿದರು.

ಶಿರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಲ್ಸನ್ ರೋಡಿಗ್ರಸ್ರವರು ಕಾಲೊನಿ ಮಹಿಳೆಯರಿಗೆ ಸೀರೆ ವಿತರಣೆಯನ್ನು ಮಾಡಿ ಮಾತನಾಡಿ ಇಂದಿರಾ ಗಾಂಧಿಯವರು ತಮ್ಮ ಮಗ ಸಂಜಯ್ ಗಾಂಧಿ ಅಪಘಾತದಿಂದ ಮರಣ ಹೊಂದಿದ ಸಂದರ್ಭದಲ್ಲೂ ಆ ನೋವನ್ನು ನುಂಗಿ ನಮ್ಮ ದೇಶವನ್ನು ಮುನ್ನಡೆಸಿದವರು. ತಮ್ಮ ಅಂಗರಕ್ಷರಿಂದಲೇ ಅವರು ಕೊಲೆಯಾದದ್ದು ಈ ದೇಶದ ದೊಡ್ದ ದುರಂತ. ದೇಶದ ಏಕತೆಗಾಗಿ ಸದಾ ಬದ್ಧರಾಗಿದ್ದವರು ಇಂದಿರಾ ಗಾಂಧಿಯವರು. ನೆಹರೂರವರ ಕುಟುಂಬದ ಕುಡಿಯಾಗಿದ್ದ ಇಂದಿರಾ ಗಾಂಧಿಯವರು ದೇಶಕ್ಕಾಗಿ ನೀಡಿದ ಸೇವೆ ಇಂದೂ ಕೂಡಾ ಅಮರವಾಗಿದೆ. ಅವರ ಮೊಮ್ಮಗ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿಯಾಗಲಿ ಎಂದು ಹಾರೈಸಿದರು. ಗಾಂಧಿ ಕುಟುಂಬದ ಸೇವೆಯನ್ನು ಇತ್ತೀಚಿನ ದಿನಗಳಲ್ಲಿ ಕೆಲವರು ಟೀಕಿಸುತ್ತಿರುವುದು ಸರಿಯಲ್ಲ ಎಂದರು.

ಕಳತ್ತೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ದಿವಾಕರ ಶೆಟ್ಟಿಯವರು ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಸೇವೆಯ ಗುಣಗಾನ ಮಾಡಿದರು.

ಕಾಪು ವಿಧಾನ ಸಭಾ ಕ್ಷೇತ್ರ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷ ಜೋಯಲ್ ಮತಾಯಸ್ ಕುತ್ಯಾರು, ಕಾಂಗ್ರೆಸ್ ನಾಯಕರಾದ ದಿವಾಕರ ಶೆಟ್ಟಿ ಕಳತ್ತೂರು, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕುಲಾಲ್, ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ತೆರೆಜಾ ಮಚಾದೋ, ಗ್ರೇಸಿ ಕಾರ್ಡೋಜ, ವೈಲೆಟ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು.

ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಕಮಲಾಕ್ಷಿ, ತುಪ್ಪೆಪಾದೆ ಕಾಲನಿಯ ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.

ಮೆಲ್ವಿನ್ ಡಿಸೋಜರವರು ಸ್ವಾಗತಿಸಿ, ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯಯವರು ವಂದಿಸಿದರು. ಯುವ ಕಾಂಗ್ರೆಸ್ನ ಅಬ್ದುಲ್ ರಜಾಕ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.


Spread the love