ಇಂದಿರಾ ಗಾಂಧಿ ದೇಶ ಕಂಡ ಅಪ್ರತಿಮ ಮಹಿಳೆ – ವಿನಯ್ ಕುಮಾರ್ ಸೊರಕೆ

Spread the love

ಇಂದಿರಾ ಗಾಂಧಿ ದೇಶಕಂಡ ಅಪ್ರತಿಮ ಮಹಿಳೆ – ವಿನಯ್ ಕುಮಾರ್ ಸೊರಕೆ

ಕಾಪು: ದೇಶದ ಬಡವರಿಗೆ 20 ಅಂಶಗಳ ಕಾರ್ಯಕ್ರಮಗಳ ಮುಖಾಂತರ ಬಡವರಿಗೆ ಮನೆ, ಅಂಗನವಾಡಿ ವ್ಯವಸ್ಥೆ, ಪಡಿತರ ವ್ಯವಸ್ಥೆ ಯನ್ನು ಜಾರಿಗೂಳಿಸಿ ಬಡತನ ನಿರ್ಮೂಲನೆಯಕ್ಕೆ ಪಣ ತೊಟ್ಟ ದಿಟ್ಟ ಮಹಿಳೆ ಶ್ರೀಮತಿ ಇಂದಿರಗಾಂಧಿಯವರು, ಎಂದು ಕಾಪು ಕ್ಷೇತ್ರದ ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.

ಅವರು ಕಾಪು ರಾಜೀವ್ ಭವನದಲ್ಲಿ ನಡೆದ ದಿ. ಶ್ರೀಮತಿ ಇಂದಿರಗಾಂಧಿಯವರ ಪುಣ್ಯತಿಥಿ  ಕಾರ್ಯಕ್ರಮದಲ್ಲಿ ಮಾತನಾಡುತ್ತ, ಇವತ್ತು ಜನಸಾಮಾನ್ಯರ, ಬಡವರ ಮನೆಗೆ ಹೂದಲ್ಲಿ ದಿ. ಶ್ರೀಮತಿ ಇಂದಿರಗಾಂಧಿಯವರ ಹೆಸರು ಕೇಳಿಬರುತ್ತದೆ. ಈ ಹಿಂದೆ ಸಂಸತ್ ನಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರು ಇಂದಿರಗಾಂಧಿಯನ್ನು ಈ ದೇಶದ ದುರ್ಗಾದೇವಿ ಎಂದು ಹೂಗಳಿದನ್ನು ನೆನಪಿಸಿದರು. ದೇಶದ ಐಕ್ಯತೆ, ಭದ್ರತೆಗೆ ತನ್ನನ್ನು ಮೂಡಿಪಾಗಿಸಿ ಕೊಂಡವರು ಎಂದು ಹೇಳಿದರು.

ಈ ಸಭೆಯಲ್ಲಿ ಕಾಪು ಕ್ಷೇತ್ರದ ಶಾಸಕರು, ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷರು ಕಾಪು ಬ್ಲಾಕ್, ಗೀತಾ ವಾಗ್ಲೆ ಅಧ್ಯಕ್ಷರು ಕಾಪು ಮಹಿಳ ಕಾಂಗ್ರೇಸ್, ಕಾಪು ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love