ಇಂದಿರಾ ಗಾಂಧಿ ನೆನಪಿನಲ್ಲಿ – ಮಹಿಳಾ ಕಾಂಗ್ರೆಸಿನಿಂದ ಆಹಾರ ಸಾಮಗ್ರಿ ವಿತರಣೆ
ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಆಶ್ರಯದಲ್ಲಿ ಇಂದಿರಾ ಗಾಂಧಿಯವರ 34ನೇ ಪುಣ್ಯ ತಿಥಿಯ ಅಂಗವಾಗಿ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋರವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರು ಇಂದಿರಾಜಿಯವರ ನೆನಪಿಗಾಗಿ ಬ್ರಹ್ಮಾವರದ “ಸ್ನೇಹಾಲಯ” ವೃದ್ದಾಶ್ರಮದ ಹಿರಿಯರೊಂದಿಗೆ ಸೌಹಾರ್ದಯುತವಾದ ಮಾತುಕತೆಯನ್ನು ನಡೆಸಿ, ಅವರೊಂದಿಗೆ ಉಪಹಾರ ಸೇವಿಸಿದರು. ಆಶ್ರಮ ನಿವಾಸಿಗಳ ದೈನಂದಿನ ಬಳಕೆಗೆ ಆಹಾರ ಸಾಮಗ್ರಿಗಳನ್ನು ಮತ್ತು ಬಟ್ಟೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿಯವರು ಮಾತನಾಡುತ್ತಾ ಇಂದಿರಾಜಿಯವರಿಗೆ ದುರ್ಬಲರ ಬಗ್ಗೆ, ಬಡವರ ಬಗ್ಗೆ, ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ಇತ್ತು. ಮಹಿಳಾ ಕಾಂಗ್ರೆಸ್‍ನ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ ಎಂದರು.
ಸರಳಾ ಕಾಂಚನ್, ಗೋಪಿ ಕೆ. ನಾಯ್ಕ್, ಸುಧಾಕರ್ ಶೆಟ್ಟಿ ಮೈರ್ಮಾಡಿ, ಜ್ಯೋತಿ ಹೆಬ್ಬಾರ್, ಡಾ. ಸುನಿತಾ ಶೆಟ್ಟಿ, ರೋಶನಿ ಒಲಿವರ್, ಮೇರಿ ಡಿ’ಸೋಜಾ, ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟ, ಸರಸ್ವತಿ, ಜಯಲಕ್ಷ್ಮಿ ಶೆಟ್ಟಿ, ಮೀನಾ ಪಿಂಟೋ, ಸುಲೋಚನಾ, ಚಂದ್ರಾವತಿ, ವಿನುತಾ, ರವಿರಾಜ್ ಶೆಟ್ಟಿ, ರವಿ ಪ್ರಕಾಶ್ ಗೊನ್ಸಾವಿಸ್, ವೈ.ಬಿ. ರಾಘವೇಂದ್ರ, ಸೂರ್ಯ ಸಾಲ್ಯಾನ್, ಪ್ರಭಾಕರ ಶೆಟ್ಟಿ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಐಸಾಕ್‍ರವರು ಉಪಸ್ಥಿತರಿದ್ದರು.