ಇತಿಹಾಸ ಹಲವಾರು ಬುದ್ದಿಜೀವಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ: ಡಾ.ರಾಮದಾಸ್

Spread the love

ಇತಿಹಾಸ ಹಲವಾರು ಬುದ್ದಿಜೀವಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ: ಡಾ.ರಾಮದಾಸ್
ಬ್ರಹ್ಮಾವರ : ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲ ಅತ್ಯಂತ ಕ್ರಿಯಾಶೀಲ, ಸೃಜನಾತ್ಮಕ ಯುಗವಾಗಿದ್ದು, ಹಲವಾರು ಬುದ್ದಿಜೀವಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿತ್ತು ಎಂದು ಉಡುಪಿ ಅಜ್ಜರಕಾಡಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಇತಿಹಾಸ ಪ್ರಾಧ್ಯಾಪಕ ಡಾ.ರಾಮದಾಸ್ ಹೇಳಿದರು.

ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಇತಿಹಾಸ ವಿಭಾಗ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳು ವಿಷಯದ ಬಗ್ಗೆ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ಏಕಮುಖವಾಗಿ ಇರಲಿಲ್ಲ. ಇದರಲ್ಲಿ ಹಲವು ಆಯಾಮ, ಮಜಲುಗಳಿದ್ದವು. ಈ ಹೋರಾಟದಲ್ಲಿ ದಲಿತರು ಮತ್ತು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ, ರೈತರು ಜಮೀನುದಾರರ ವಿರುದ್ಧ ಸಿಡಿದೆದ್ದರೆ, ಮಹಿಳೆಯರು ವಿಮೋಚನೆಗಾಗಿ ಹೋರಾಟ ನಡೆಸಿದ್ದರು ಎಂದು ಅವರು ತಿಳಿಸಿದರು.

ಉಡುಪಿ ಅಜ್ಜರಕಾಡಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಶೆಟ್ಟಿ ಚರಿತ್ರ ಲೇಖಕರ ಇತಿಹಾಸ ವಿಷಯದ ಬಗ್ಗೆ ಮಾತನಾಡಿ ಸಾಮ್ರಾಜ್ಯಶಾಹಿ ಇತಿಹಾಸಕಾರರು ಐರೋಪ್ಯ ದೃಷ್ಟಿಕೋನದಲ್ಲಿ ಇತಿಹಾಸ ರಚಿಸಿದ್ದರು ಎಂದು ತಿಳಿಸುತ್ತಾ ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಇತಿಹಾಸಕಾರರು ಇತಿಹಾಸ ರಚಿಸಿದರು ಎಂದರು.

ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಕೆ.ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ವಂದಿಸಿದರು.


Spread the love