Home Mangalorean News Kannada News ಇನ್ನೂ 15 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ – ಪರ್ಯಾಯ ಅದಮಾರು...

ಇನ್ನೂ 15 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ – ಪರ್ಯಾಯ ಅದಮಾರು ಮಠ

Spread the love

ಇನ್ನೂ 15 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ – ಪರ್ಯಾಯ ಅದಮಾರು ಮಠ

ಉಡುಪಿ: ಜೂನ್ 1 ರಿಂದ ರಾಜ್ಯದ ಇತರ ದೇವಸ್ಥಾನಗಳು ದರ್ಶನಕ್ಕೆ ಅವಕಾಶ ನೀಡಿದರೂ ಸಹ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಂದು 10-15 ದಿನಗಳ ಕಾಲದ ನಂತರ ಆ ಸಂದರ್ಭಾನುಸಾರ ಕೊರೋನಾ ಪರಿಣಾಮವನ್ನು ಗಮನಿಸಿ ಇತರ ಮಠಾಧೀಶರು ಸಹಮತ ಮತ್ತು ಸಲಹೆ ಸೂಚನೆಯನ್ನು ಅನುಸರಿಸಿ ಹಿಂದಿನ ದಿನಗಳಂತೆಯೇ ಭಕ್ತರಿಗೆ ಮುಕ್ತವಾಗಿ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪರ್ಯಾಯ ಅದಮಾರು ಮಠ ಪೊಡವಿಗೊಡೆಯ ಶ್ರೀಕೃಷ್ಣನ ಕ್ಷೇತ್ರ ಉಡುಪಿ . ಉಡುಪಿಯಲ್ಲಿ ಆಚಾರ್ಯ ಮಧ್ವರು ಶ್ರೀ ಕೃಷ್ಣನು ಪ್ರತಿಷ್ಠಾಪಿಸಿ, ಪರಂಪರೆಯ ರಕ್ಷಣೆಗಾಗಿ ಮತ್ತು ತತ್ವಜ್ಞಾನ ಪ್ರಸಾರಕ್ಕಾಗಿ ಅಷ್ಟ ಯತಿವರ್ಯ ರಿಗೆ ಶ್ರೀ ಕೃಷ್ಣ ಪೂಜಾ ದೀಕ್ಷೆ ನೀಡಿದರು .ಈ ಪೂಜಾ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಪ್ರಸಕ್ತ ಕೊರೋನಾ ಕೋವಿಡ್ 19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠ ಪರಂಪರೆ ಉಳಿಸುವ ದೃಷ್ಟಿಯಿಂದ ಈ ದಿನಗಳಲ್ಲಿ ಭಕ್ತರಿಗೆ ಶ್ರೀಕೃಷ್ಣಮಠದ ಒಳಗೆ ಪ್ರವೇಶ ನೀಡದೆ ಮಾನ್ಯ ಪ್ರಧಾನ ಮಂತ್ರಿಗಳ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿಕೊಂಡು ಬಂದಿದೆ. ಶ್ರೀಕೃಷ್ಣ ಭಕ್ತರು ಹೊರಗಡೆಯಿಂದ ದರ್ಶನಕ್ಕೆ ವ್ಯವಸ್ಥೆ ಇದ್ದು ಭಕ್ತರು ಸಹಕಾರವನ್ನು ನೀಡಿದ್ದಾರೆ. ಶ್ರೀಕೃಷ್ಣಮಠದಲ್ಲಿ ಅಗತ್ಯ ಸೇವಾ ಪರಿಚಾರಕರು ಮಾತ್ರ ಒಳಗೆ ಇದ್ದು ಪೂಜಾ ಕೈಂಕರ್ಯ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ.

ಇತರ ದೇವಸ್ಥಾನಗಳಲ್ಲಿ ದೇವರ ದರ್ಶನ ವ್ಯವಸ್ಥೆ ಕಲ್ಪಿಸಿದರು ಸಹ, ಶ್ರೀಕೃಷ್ಣ ಮಠದಲ್ಲಿ ಅಷ್ಟ ಮಠದ ಯತಿಗಳೇ ಪೂಜೆ ನಡೆಸುವ ಕ್ರಮ ಇದೆ ಒಳಗಿನವರಿಗೆ ಏನಾದರೂ ತೊಂದರೆ ಆದರೆ ಅನುಚಾನ ಪದ್ಧತಿಗೆ ಭಂಗ ಬರುವಂತಹ ಸಂದರ್ಭಗಳು ಇರುತ್ತವೆ.

ಈ ಸಂದರ್ಭದಲ್ಲಿ ಎಲ್ಲಾ ದೇವಸ್ಥಾನಗಳು ದರ್ಶನಕ್ಕೆ ಅವಕಾಶ ನೀಡಿದ್ದರೂ ಸಹ, ಮಾಡಿದ ಸಂಪ್ರದಾಯ ರಕ್ಷಣೆ ಆಚಾರ್ಯ ಮಧ್ವರು ಯೂ ಆದ್ಯ ಕರ್ತವ್ಯ ವಾಗಿರುವುದರಿಂದ ಶ್ರೀಕೃಷ್ಣ ಮಠದಲ್ಲಿ ಮುಂದಿನ 10-15 ದಿನಗಳ ಕಾಲದ ನಂತರ ಆ ಸಂದರ್ಭಾನುಸಾರ ಕೊರೋನಾ ಪರಿಣಾಮವನ್ನು ಗಮನಿಸಿ ಇತರ ಮಠಾಧೀಶರು ಸಹಮತ ಮತ್ತು ಸಲಹೆ ಸೂಚನೆಯನ್ನು ಅನುಸರಿಸಿ ಹಿಂದಿನ ದಿನಗಳಂತೆಯೇ ಭಕ್ತರಿಗೆ ಮುಕ್ತವಾಗಿ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಕರಕಮಲ ಸಂಜಾತ ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಭಕ್ತರ ಆರೋಗ್ಯ ದೃಷ್ಟಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು ಶ್ರೀ ಕೃಷ್ಣ ಭಕ್ತರು ಎಂದಿನಂತೆ ತಮ್ಮ ಸಹಕಾರ ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಪ್ರಕಟಣೆ ತಿಳಿಸಿದೆ.


Spread the love

Exit mobile version