‘ಇಮ್ ಪ್ರಿಂಟ್-2020’ ಆಳ್ವಾಸ್ ವಿದ್ಯಾರ್ಥಿಗಳು ಚಾಂಪಿಯನ್ಸ್
ವಿದ್ಯಾಗಿರಿ: ಮಂಗಳೂರಿನ ಅಲೋóಷಿಯಸ್ ಕಾಲೇಜಿನಲ್ಲಿ ನಡೆದ ‘ಇಮ್‍ಪ್ರಿಂಟ್-2020’ ರಾಷ್ಟ್ರಮಟ್ಟದ ವಿಜ್ಞಾನ ಉತ್ಸವ ಮತ್ತು ಪ್ರದರ್ಶನದಲ್ಲಿ ಆಳ್ವಾಸ್ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ಇಮ್‍ಪ್ರಿಂಟ್-2020ಯಲ್ಲಿ ವಿದ್ಯಾರ್ಥಿಗಳಿಗಾಗಿ ಇಥರ್, ಬೆಲಡೋನಾ, ಸಿಂಫೋನಿ, ಕಂಜೆಪ್ಚರ್ ಹೀಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
‘ಕಾಸ್ಮೊಗನಿ’ ಸ್ಪರ್ಧೆಯಲ್ಲಿ ಸಾಗರ್ ಎಸ್. ಮತ್ತು ನಮ್ರತಾ ಡಬ್ಲ್ಯು. ಎನ್ ಪ್ರಥಮ, ‘ಇಥರ್’ ಸ್ಪರ್ಧೆಯಲ್ಲಿ ಶೃತಿ ಶೆಟ್ಟಿ ಪ್ರಥಮ, ‘ಡಿಸೆಪ್ಟೊ ಸ್ಟಾಟಿಕ್ಸ್’ನಲ್ಲಿ ಪ್ರೀತಿ ಕಟ್ಟಿ ಪ್ರಥಮ, ‘ಕಂಜೆಕ್ಚರ್’ನಲ್ಲಿ ಅನುಷಾ ಕಾಮತ್ ದ್ವಿತೀಯ, ಕ್ರಿಪ್ಟೊಕ್ರಿಟ್ಟರ್‍ನಲ್ಲಿ ಅಂಜನ್ ಟಿ.ಕೆ ಪ್ರಥಮ, ‘ಬೆಲಡೋನಾ’ನಲ್ಲಿ ಶ್ರೀಜಿತ್ ಪ್ರಥಮ, ‘ಮ್ಯಾಡ್ ಸೈಂಟಿಸ್ಟ್ ಸಿಂಫೋನಿ’ ಸ್ಪರ್ಧೆಯಲ್ಲಿ ಶ್ರೇಯಸ್ ಜೈನ್, ಸುಬ್ರಮಣ್ಯ ಹೆಗ್ಡೆ ಪ್ರಥಮ, ‘ಮಿರಾಜ್’ನಲ್ಲಿ ವಿಯೋನಾ, ಜೇಸನ್ ರೆಬೆಲ್ಲೊ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ವಿಜ್ಞಾನ ವಿಭಾಗದ ಡೀನ್ ಪ್ರೋ ರಮ್ಯಾ ರೈ ಪಿ.ಡಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.