ಇಲ್ಯಾಸ್ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿಯ ಸೆರೆ

Spread the love

ಇಲ್ಯಾಸ್ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿಯ ಸೆರೆ

ಮಂಗಳೂರು: ಜೆಪ್ಪು ಕುಡ್ಪಾಡಿಯ ಅಪಾರ್ಟ್ ಮೆಂಟಿನಲ್ಲಿ ಜನವರಿ 13 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತನ್ನು ಉಳ್ಳಾಲ ಒಳಪೇಟೆ, ಮದನಿ ಶಾಲೆ ನಿವಾಸಿ ಉಮ್ಮರ್ ನವಾಫ್ @ ನವಾಫ್ @ ಮಾಯಾ (25) ಎಂದು ಗುರುತಿಸಲಾಗಿದೆ.

ಬಂಧೀತನನ್ನು ಮಂಗಳೂರು ನಗರ ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕರು, ಮಂಗಳೂರು ಮಹಾಕಾಳಿಪಡ್ಪು ಬಳಿಯಿಂದ ಬಂಧಿಸಿ, ಆರೋಪಿ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ಹಾಗೂ ಎರಡು ತಲವಾರುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿ ಉಮ್ಮರ್ ನವಾಫ್ @ ನವಾಫ್ ನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಕಿಡ್ನಾಪ್ ಹೀಗೆ ಒಟ್ಟು ಏಳು ಪ್ರಕರಣಗಳು ಹಾಗೂ ಮಂಜೇಶ್ವರ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ದಾವೂದ್, ಮಹಮ್ಮದ್ ಸಮೀರ್ @ ಸಮೀರ್, ಮಹಮ್ಮದ್ ನಾಸಿರ್ @ ನಾಸಿರ್ @ ನಾಚಿ, ರಿಯಾಜ್ ಎ @ ರಿಯಾ @ಇಯ್ಯಾ ಮತ್ತು ನಮೀರ್ ಹಂಝ ರವರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಲ್ಲಿರುತ್ತಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರು(ಕಾನೂನು ಸುವ್ಯವಸ್ಥೆ) ಮತ್ತು ಉಪ ಪೊಲೀಸ್ ಆಯುಕ್ತರು(ಅಪರಾಧ) ರವರ ಸೂಚನೆಯಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರಾಮರಾವ್, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕರಾದ ಸಾಯಿನಾಥ ಎಮ್ ರಾಣೆ ರವರು ಆರೋಪಿಯನ್ನು ಬಂಧಿಸಿರುತ್ತಾರೆ. ಆರೋಪಿ ಪತ್ತೆಗೆ ಮಂಗಳೂರು ದಕ್ಷಿಣ ಠಾಣೆಯ ಪಿಎಸ್ಐ ಉಮೇಶ್ ಕುಮಾರ್ ಎಮ್.ಎನ್ ಮತ್ತು ಪಿಎಸ್ಐ ಮಂಜುಳಾ, ಮಂಗಳೂರು ದಕ್ಷಿಣ ಠಾಣೆಯ ಸಿಬ್ಬಂಧಿಗಳು ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.


Spread the love