ಇಸ್ಪೀಟು ಅಕ್ರಮ ಜುಗಾರಿ ಅಡ್ಡೆಗೆ ದಾಳಿ 9 ಮಂದಿ ಬಂಧನ
ಮಂಗಳೂರು: ಪಣಂಬೂರು ಠಾಣಾ ಸರಹದ್ದಿನ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಟರ್ಮಿನಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 9 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 12,600/- ಇಸ್ಪೀಟ್ ಎಲೆಗಳು-52 ಮತ್ತು ದಿನಪತ್ರಿಕೆಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಬಂಧಿತರನ್ನು ಮುನ್ನ ಯಾನೆ ಹರಿಪ್ರಸಾದ್, ಲಿಂಗರಾಜ್, ಜಯಂತ್, ಪ್ರಸಾದ್, ರಮೇಶ್, ತೀರ್ಥಪ್ರಸಾದ್, ಕಾರ್ತಿಕ್, ಶರತ್, ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಹನುಮಂತರಾಯ, ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಮ್ ,ಪಿ.ಎಸ್.ಐ(ಕಾ.ಸು) ಮಂಗಳೂರು ಉತ್ತರ ಉಪವಿಭಾಗ ರೌಡಿನಿಗ್ರಹ ದಳದ ಅಧಿಕಾರಿ / ಸಿಬ್ಬಂಧಿಗಳು ಮತ್ತು ಪಣಂಬೂರು ಪೋಲಿಸರು ಶ್ರಮಿಸಿರುತ್ತಾರೆ.