ಇ ಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಶೋಭಾ ಕರಂದ್ಲಾಜೆಗೆ ಯಶ್ಪಾಲ್ ಮನವಿ

Spread the love

ಇ ಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಶೋಭಾ ಕರಂದ್ಲಾಜೆಗೆ ಯಶ್ಪಾಲ್ ಮನವಿ

ಉಡುಪಿ: ಕೇಂದ್ರ ಸರ್ಕಾರದ ಸಾಮಾಜಿಕ ಬದ್ಧತೆಯ ಪ್ರಮುಖ ಯೋಜನೆಯಾದ ಖಾಸಗಿ ರಂಗದ ಕಾರ್ಮಿಕರಿಗೆ / ಉದ್ಯೋಗಿಗಳಿಗೆಇ ಎಸ್ ಐ ಸೌಲಭ್ಯದ ವೇತನ ಮಿತಿಯನ್ನು ₹ 30,000 ಕ್ಕೆ ಏರಿಕೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರವರು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ಸಚಿವರಾದ ಶೋಭಾ ಕರಂದ್ಲಾಜೆ ಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.

ಈ ಹಿಂದೆ ಇದ್ದ 15 ಸಾವಿರ ವೇತನ ಮಿತಿಯನ್ನು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 22 ಡಿಸೆಂಬರ್ 2016 ರಂದು 21 ಸಾವಿರಕ್ಕೆ ಏರಿಕೆ ಮಾಡಿ ದೇಶದ ಕೋಟ್ಯಾಂತರ ಕಾರ್ಮಿಕರು/ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಯೋಜನೆಯ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿತ್ತು.

ಕಳೆದ 8 ವರ್ಷಗಳಿಂದ ಇ ಎಸ್ ಐ ಸೌಲಭ್ಯಕ್ಕೆ ಅರ್ಹ ವೇತನ ಮಿತಿ ಏರಿಕೆಯಾಗದ ಕಾರಣ 21 ಸಾವಿರ ಮೇಲ್ಪಟ್ಟ ವೇತನ ಶ್ರೇಣಿಯ ಕಾರ್ಮಿಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಲ್ಲಿ ನೀಡಲಾಗುವ ವಾರ್ಷಿಕ ಭಡ್ತಿ, ಬೆಲೆ ಏರಿಕೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಪ್ರಸ್ತುತ ಇರುವ 21 ಸಾವಿರ ವೇತನ ಮಿತಿಯನ್ನು 30 ಸಾವಿರಕ್ಕೆ ಏರಿಕೆ ಮಾಡಿದರೆ ಕಾರ್ಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ ದೇಶದ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ವೇತನ ಮಿತಿ ಏರಿಕೆಗೆ ಕ್ರಮವಹಿಸುವ ಭರವಸೆ ನೀಡಿದರು.


Spread the love
Subscribe
Notify of

0 Comments
Inline Feedbacks
View all comments