ಈದುಲ್ ಫಿತ್ರ್ ಹಬ್ಬದ ದಿನ ಮನೆಯಲ್ಲಿಯೇ ನಮಾಜ್ ನಿರ್ವಹಿಸಲು ದಕ ಜಿಲ್ಲಾ ಖಾಜಿ ಸೂಚನೆ
ಮಂಗಳೂರು: ಈದುಲ್ ಫಿತ್ರ್ ಹಬ್ಬದ ದಿನ ಎಲ್ಲಾ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಇದ್ದು ಈದ್ ನಮಾಜನ್ನು ಮನೆಗಳಲ್ಲಿಯೇ ನಿರ್ವಹಿಸುವಂತೆ ದ.ಕ ಜಿಲ್ಲಾ ಖಾಜಿ ಅವರಾದ ಬಹುಮಾನ್ಯ ಅಲ್ ಹಾಜ್ ಶೈಖುನಾ ತಾಖಾ ಅಹಮದ್ ಅಲ್ ಅಝುರಿ ಉಸ್ತಾದ್ ರವರು ವಿನಂತಿಸಿದ್ದಾರೆ ಹಾಗೂ ಶಾಫಿ ಮರುಬ್ ಪ್ರಕಾರ ಈದ್ ನಮಾಝ್ ನಿರ್ವಹಿಸುವ ಬಗ್ಗೆ ವಿವರಣೆಯನ್ನು ನೀಡುತ್ತಾರೆ.
– ಶಾಫಿ ಮರುಬ್ ಪ್ರಕಾರ ಪೆರ್ಣಾಬ್ ನಮಾಝ್ ನಿಯ್ಯತ್ ಮಾಡಿ ಮೊದಲ ರಕ-ಅತಿನಲ್ಲಿ 7 ತಕ್ಷೀರ್ ಹೇಳಿ ಫಾತಿಹಾ ಹಾಗೂ ಸೂರತ್ ಓದಿದ ರಕಅತ್ ಪೂರ್ಣಗೊಳಿಸಿ ನಂತರ ಎರಡನೇ ರಕಅತಿನಲ್ಲಿ 5 ತಕ್ಷೀರ್ ನಂತರ ಫಾತಿಹಾ ಹಾಗೂ ಸೂರತ್ ಓದಿದ ರುಕೂ ಹಾಗೂ ಎರಡು ಸುಜೂದ್ ನಂತರ ಅತ್ತಹಿಯಾತ್ ಓದಿ ನಮಾಝಲ್ ಪೂರ್ತಿಗೊಳಿಸಬೇಕು. ಎಲ್ಲಾ ತಕ್ಕೀರಿನ ಮಧ್ಯದಲ್ಲಿ “ಸುಬ್-ಹಾನಲ್ಲಾಹಿ ವಲ್ –ಹಮ್ದುಲಿಲ್ಲಾಹ್ ಲಾ ಇಲಾಹ ಇಲ್ಲಲ್ಲಾಹ್ ವಲ್ಲಾಹು ಅಕ್ಷರ” ಎಂಬ ತಹ್ ಹೇಳಬೇಕು. ಖುತುಬಾ ಸುನ್ನತ್ ಆದ ಕಾರಣ ಖುತುಬಾವನ್ನು ಉಪೇಕ್ಷಿಸಬಹುದು, ಝಕಾತಿಗಾಗಿ ಜನರು ಬೀದಿಗಳಲ್ಲಿ ನಡೆಯುವುದನ್ನು ತಡೆಯುವ ಸಲುವಾಗಿ ಕಡ್ಡಾಯವಾದ ಫಿತ್ ಝಕಾತನ್ನು ಬಡವರ ಮನೆಗಳಿಗೆ ಮುಟ್ಟಿಸುವಂತೆ ಪ್ರಯತ್ನಿಸಬೇಕು.
ಅಲ್ಲಾಹನು ಲೋಕದಿಂದ ಈ ಕೊರೊನಾ ಎಂಬ ಮಹಾ ಮಾರಕ ರೋಗದಿಂದ ಮುಕ್ತಿಗೊಳಿಸಿ ಇದನ್ನು ಮುಂದೆ ಬರುವ ಹಬ್ಬಗಳನ್ನು ಮಸೀದಿ ಹಾಗೂ ಈದ್ದಾಗಳಲ್ಲಿ ನಿರ್ವಹಿಸುವಂತೆ ದಯಪಾಲಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.