ಈಶ್ವರಪ್ಪ ಮುಸ್ಲಿಂರಿಗೆ ಬೈಯ್ಯವ ಬದಲು ಬ್ಲೂಫಿಲಂ ನೋಡಿದರೆ ಬಿಜೆಪಿಯಲ್ಲಿ ಪ್ರಮೋಶನ್ ಸಿಗುತ್ತೆ – ಶಾಹುಲ್ ಹಮೀದ್

Spread the love

ಈಶ್ವರಪ್ಪ ಮುಸ್ಲಿಂರಿಗೆ ಬೈಯ್ಯವ ಬದಲು ಬ್ಲೂಫಿಲಂ ನೋಡಿದರೆ ಬಿಜೆಪಿಯಲ್ಲಿ ಪ್ರಮೋಶನ್ ಸಿಗುತ್ತೆ – ಶಾಹುಲ್ ಹಮೀದ್

ಮಂಗಳೂರು: ಮುಸ್ಲಿಂ ಸಮುದಾಯದ ಬಗ್ಗೆ ಆಡಿದ ಮಾತುಗಳಿಂದಾಗಿ ರಾಜ್ಯ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೊಲಸು ಬಾಯಿಯ ರಾಜಕಾರಣಿ ಎನ್ನುವುದ ಸಾಬೀತಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಹುಲ್ ಹಮೀದ್ ಹೇಳಿದ್ದಾರೆ.

ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಈಶ್ವರಪ್ಪ ಮುಸ್ಲಿಂಮರನ್ನು ಹಿಜಡಾಗಳು ಎಂದು ಅವಹೇಳನ ಮಾಡಿದ್ದು ಅವರು ಈ ವರೆಗೆ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿದಾಗ ಅವರು ಕೇವಲ ಒಬ್ಬ ಭ್ರಷ್ಠ ರಾಜಕಾರಣಿ ಎನ್ನುವುದು ಮಾತ್ರ ತಿಳಿದಿತ್ತು ಆದರೆ ಅವರು ಭಾನುವಾರ ಮುಸ್ಲಿಂರನ್ನು ಕೆಟ್ಟ ಭಾಷೆಯಲ್ಲಿ ಮಾತನಾಡಿದಾಗ ಅವರು ಎಷ್ಟೊಂದು ಹೊಲಸು ಬಾಯಿಯ ರಾಜಕಾರಣಿ ಎನ್ನುವುದು ಸಾಬೀತಾಗಿದೆ. ಬಾಯಿಬಿಟ್ಟರೆ ಮುಸ್ಲಿಂರನ್ನು ಭಯೋತ್ಪಾಕರು, ಪಾಕಿಸ್ತಾನದವರು ಎಂದು ಸಂಬೋಧಿಸುವ ಈಶ್ವರಪ್ಪ ಅವರು ತಮ್ಮ ಮಾನಸಿಕ ಸ್ಥಿಮತವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಅವರನ್ನು ಬೇಗನೇ ಯಾವುದಾದರೊಂದು ಹುಚ್ಚಾಸ್ಪತ್ರೆಗೆ ಸೇರಿಸುವುದು ಉತ್ತಮ ಎಂದರು.

ಒರ್ವ ಜವಾಬ್ದಾರಿಯುತ ಮಂತ್ರಿಯಾಗಿದ್ದು ಅವರು ಅಂದು ವೇದಿಕೆಯಲ್ಲಿ ಕೊಲೆ ಸುಲಿಗೆ ಮಾಡಿದ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಂಡು ತನ್ನ ಸುತ್ತಮುತ್ತ ಇರುವವರೆಲ್ಲರೂ ದೇಶ ಭಕ್ತರು ಎಂದು ಹೇಳುತ್ತಾರೆ.ಅದೇ ರೀತಿ ಯಾರೆಲ್ಲಾ ಬಿಜೆಪಿಗೆ ಮತ ಹಾಕುವುದಿಲ್ಲವೋ ಅವರೆಲ್ಲರೂ ದೇಶ ದ್ರೋಹಿಗಳು ಎಂದು ಕರೆಯುತ್ತಾರೆ. ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ 36% ಜನರು ಮತ ಹಾಕಿದ್ದರೆ 64% ಮಂದಿ ಬಿಜೆಪಿಯ ವಿರುದ್ಧವಾಗಿ ಮತ ಹಾಕಿದ್ದಾರೆ. ಹಾಗದರೆ ಬಿಜೆಪಿ ವಿರುದ್ದವಾಗಿ ಮತ ಹಾಕಿದ 64% ಜನರು ಕೂಡ ದೇಶ ದ್ರೋಹಿಗಳ ಎನ್ನುವುದನ್ನು ಬಿಜೆಪಿ ಉತ್ತರಿಸಬೇಕಾಗಿದೆ. ಈಶ್ವರಪ್ಪ ಕೇವಲ ನೋಟು ಎಣಿಸುವ ಯಂತ್ರ ಇಟ್ಟುಕೊಂಡರೆ ಸಾಲದ ಅದರ ಜೊತೆಯಲ್ಲಿ ಪಾಪವನ್ನು ಎಣಿಸುವ ಯಂತ್ರ ಕೂಡ ಇಟ್ಟುಕೊಳ್ಳಬೇಕು ಎಂದರು. ಈಶ್ವರಪ್ಪನವರ ಅಣಿಮುತ್ತುಗಳನ್ನು ಕೇಳಿಕೊಂಡು ಬಿಜೆಪಿಗರು ಎಷ್ಟು ಸಮಯ ಇರುತ್ತಾರೆ ಎನ್ನುವುದನ್ನು ಯೋಚಿಸಬೇಕು. ಯಡ್ಯೂರಪ್ಪ ಆಗಲಿ ಸಿ ಟಿ ರವಿ ಕೂಡ ಈ ವರೆಗೆ ಮುಸ್ಲಿಂರ ವಿರುದ್ದ ಈ ರೀತಿಯ ಮಾತುಗಳನ್ನು ಆಡಿಲ್ಲ ಎಂದರು.

ಈಶ್ವರಪ್ಪನವರಿಗೆ ಮುಸ್ಲಿಂ ಸಮುದಾಯವನ್ನು ಬೈದ ಕೂಡಲೇ ಪ್ರಮೋಶನ್ ಸಿಗುತ್ತೆ ಎಂಬ ಅಪೇಕ್ಷೆ ಇದ್ದರೆ ಅದನ್ನು ಮರೆತು ಬಿಡಿ ನಿಜವಾಗಿಯೂ ನಿಮಗೆ ಪ್ರಮೋಶನ್ ಸಿಗಲೇ ಬೇಕಾದರೆ ನಿಮ್ಮ ಮೊಬೈಲಿನ್ನು ತೆಗೆದುಕೊಂಡು ಹೋಗಿ ವಿಧಾನಸೌದದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿ ಕೂಡಲೇ ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದರು.

ಬಿಜೆಪಿ ಪಕ್ಷದಲ್ಲಿ ಈಗಾಗಲೇ ಈಶ್ವರಪ್ಪನವರು ಮೂಲೆ ಗೂಂಪಾಗುತ್ತಿದ್ದು ಮುಸ್ಲಿಂರಿಗೆ ಬೈದ ಕೂಡಲೇ ನಿಮಗೆ ಒಳ್ಳೆಯದಾಗುತ್ತದೆ ಎನ್ನುವ ಕನಸು ಕಾಣಲು ಹೋಗಬೇಡಿ. ಈಗಾಗಲೇ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವುದು ಕೂಡ ತಪ್ಪಿದೆ ಮುಂದೆ ಸಂಪೂರ್ಣವಾಗಿ ಬಿಜೆಪಿ ಪಕ್ಷದಲ್ಲಿ ಮೂಲೆಗೂಂಪಾಗಲಿದ್ದೀರಿ ಎಂದರು. ಯಾರ ಬಗ್ಗೆ ಕೂಡ ಮಾತನಾಡುವಾಗ ನೋಡಿ ಎಚ್ಚರಿಕೆಯಿಂದ ಮಾತನಾಡಬೇಕು. ನಮಗೂ ಕೂಡ ಈಶ್ವರಪ್ಪನವರಂತೆ ಬೈಯಲು ಬರುತ್ತೇ ಆದರೆ ನಮ್ಮ ಸಂಸ್ಕೃತಿ ಅದನ್ನು ನಮಗೆ ಹೇಳಿಕೊಟ್ಟಿಲ್ಲ ಕಾಂಗ್ರೆಸ್ ಯಾವುತ್ತೂ ಶಾಂತಿ ಪ್ರಿಯ ಆದ್ದರಿಂದ ಈಶ್ವರಪ್ಪನವರ ಮಾತುಗಳನ್ನು ಖಂಡಿಸುತ್ತೇವೆ ಎಂದರು.


Spread the love