ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ
ಕಾರ್ಕಳ: ಬಂಡಿಮಠ ಫೌಂಡೇಶನ್ ಕಾರ್ಕಳ, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇವರ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮವು ಮಾ.2 ರಂದು ಕಾರ್ಕಳ ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲೆಯಲ್ಲಿ ನಡೆಯಿತು.
ಕಾರ್ಕಳದ ಖ್ಯಾತ ಇ.ಎನ್.ಟಿ. ತಜ್ಙರಾದ ಡಾ. ಅನಂತ ಕಾಮತ್ ಶಿಬಿರವನ್ನು ಉದ್ಘಾಟಿಸಿ ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಜನರಿಗೆ ತಲುಪಿಸುವುದು ಅಸಾಧ್ಯ ಸ್ಥಳೀಯ ಸಂಘ ಸಂಸ್ಥೆಗಳು, ಬಂಡಿಮಠ ಫೌಂಡೇಶನ್‌ನಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುವ ಸಂಸ್ಥೆಗಳ ಮೂಲಕ ಶಿಬಿರಗಳನ್ನು ಅಯೋಜಿಸಿ ಅರ್ಹ ಬಡ ಜನರಿಗೆ ಸವಲತ್ತುಗಳನ್ನು ನೀಡಿ ಸಹಕರಿಸುತ್ತಿರುವುದು ಶ್ಲಾಘನೀಯ ಕೆಲಸವೆಂದರು.
ಸಭೆಯ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಹಿಸಿ ಮಾತನಾಡಿ ಬಂಡಿಮಠ ಫೌಂಡೇಶನ್ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇನ್ನಷ್ಟು ಜನೋಪಯೋಗಿ ಕೆಲಸಗಳು ಫೌಂಡೇಶನ್ ಮೂಲಕ ನಡೆಯಲಿ ಎಂದರು,
ವೇದಿಕೆಯಲ್ಲಿ ವಿಟ್ನ ಅರ್ತ್ ಕ್ಲಿನಿಕ್‌ನ ಡಾ.ಅಂಕಿತಾ, ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ| ಕಾಂತಿ ಹರೀಶ್, ಬಂಡಿಮಠ ಫೌಂಡೇಶನ್ ಕಾರ್ಕಳ ಮುಖ್ಯಸ್ಥರಾದ ರಿಜ್ವಾನ್, ಟೀಮ್ ಈಶ್ವರ್ ಮಲ್ಪೆ ಅಧ್ಯಕ್ಷರಾದ ಲವ ಕುಮಾರ್, ಹರೀಶ್ ಶೆಟ್ಟಿ ಬಂಡಿಮಠ, ಹೆಲ್ಪ್ ಲೈನ್ ನ ಮುಖ್ಯಸ್ಥರಾದ ಮುಸ್ತಫ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು.
ಶ್ವೇತ ನಿತಿನ್ ಕಾರ್ಯಕ್ರಮ ನೀರೂಪಿಸಿದರು. ಡಾ| ಕಾಂತಿ ಹರೀಶ್ ಸ್ವಾಗತಿಸಿ, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು.