Home Mangalorean News Kannada News ಉಚ್ಚಿಲದಲ್ಲೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ

ಉಚ್ಚಿಲದಲ್ಲೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ

Spread the love

ಉಚ್ಚಿಲದಲ್ಲೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ

ಪಡುಬಿದ್ರಿ; ಇಲ್ಲಿಗೆ ಸಮೀಪದ ಉಚ್ಚಿಲ ಬಡಾಗ್ರಾಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ, ಸುಮಾರು 20ಜನರನ್ನೊಳಗೊಂಡ ಮದುವೆ ಸೋಮವಾರ ವಧುವಿನ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಅತ್ಯಂತ ಸರಳತೆಯಿಂದ ಜರಗಿತು.

ಉಚ್ಚಿಲ ನಾರಾಯಣ ಗುರು ರಸ್ತೆಯ ಶಿನಕೃಪಾ ಮನೆಯ ನಿವಾಸಿ ಶೀಮತಿ ಲಕ್ಚ್ಮಿ ಮತ್ತು ಶೇಖರ ದಂಪತಿಗಳ ಪುತ್ರಿ ಪವಿತ್ರ ಮತ್ತು ಕಾರ್ಕಳ ದ ನಿವಾಸಿ ದಿ. ರಾಮ ದೇವಾಡಿಗರವರ ಪುತ್ರ ಸಂತೋಷ್ ರವರೊಂದಿಗೆ ಎ27 ಮೂಳೂರು ನಾರಾಯಣಗುರು ಸಭಾಭವನದಲ್ಲಿ ನಡೆಯಬೇಕಿತ್ತು. ಕೋವಿದ್ 19 ಮಹಾಮಾರಿಯಿಂದ ಮದುವೆ ನಡೆಯುವುದು ಅಸಂಭವವಾಗಿತ್ತು. ವರನ ಮತ್ತು ವಧುವಿನ ಮನೆಯವರು ತಮ್ಮಳಗೆ ಒಡಂಬಡಿಕೆ ಮಾಡಿಕೊಂಡು ಸರಳ ಮದುವೆ ಮಾಡುವುದೆಂದು ಒಮ್ಮತದ ತೀರ್ಮಾನಕ್ಕೆ ಬದ್ಧರಾದರು. ಆ ಪ್ರಯುಕ್ತ, ವಧುವಿನ ಮನೆಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳ ಮದುವೆ ನಡೆಯಿತು.

ಉಚ್ಚಿಲದ ಖ್ಯಾತ ಪುರೋಹಿತ ವೇದಮೂರ್ತಿ ಕುಶ ಭಟ್ ಮತ್ತು ರಾಘವೇಂದ್ರ ಭಟ್ ರವರು ಸರಳ ಮದುವೆಯ ಪೌರೋಹಿತ್ಯ ವಹಿಸಿದ್ದರು. ವಧುವಿನ ಕಡೆಯವರು ಕಾರ್ಕಳ ದಿಂದ ಬರಬೇಕಾಗಿದ್ದು, ಅವರು ಬರುವ ಹಾದಿಯಲ್ಳೇ ತಡೆದು ಅವರನ್ನು ಸ್ಕ್ರೀನಿಂಗ್ ಗೆ ಒಳಪಡಿಸಿದ್ದಾಗಿ ಹೇಳಿದ್ದಾರೆ.ಪೋಲೀಸರು ಕೇವಲ 10 ಮಂದಿಗಷ್ಟೇ ಅನುಮತಿ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳೊವಂತೆ ಮನವರಿಕೆ ಮಾಡಿದ್ದಾರೆ.

ಆ ಪ್ರಯುಕ್ತ ಆಗಮಿಸುವ ಎಲ್ಲರಿಗೂ ಮೊದಲಿಗೆ ಸ್ಯಾನಿಟೈಸರ್ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಮದುವೆ ಚಪ್ಪರದೊಳಗೆ ಬಿಡಲಾಯಿತು.

ಮದುವೆ ಕಾರ್ಯಕ್ರಮವು ಕೇವಲ ಅರ್ಧ ಗಂಟೆಯಲ್ಲಿ ಮುಗಿದಿದೆ. ಊಟೋಪಚಾರದ ನಂತರ ವರನ ಕಡೆಯವರು 10-30ಕ್ಕೆ ಕಾರ್ಕಳದ ವರನ ಮನೆಗೆ ವಧುವಿನೊಂದಿಗೆ ತೆರಳಿದ್ದಾರೆ.


Spread the love

Exit mobile version