ಉಡುಪಿಯಲ್ಲಿ ಮತ್ತೆ ಎರಡು ಕೊರೋನಾ ಸೊಂಕು ದೃಢ
ಉಡುಪಿ: ರಾಜ್ಯದಲ್ಲಿ ಕೊರೊನಾ ಮತ್ತಷ್ಟು ತೀವ್ರಗೊಂಡಿದ್ದು, ಭಾನುವಾರ ಉಡುಪಿಯಲ್ಲಿ ಮತ್ತೆ ಎರಡು ಸೊಂಕು ದೃಢವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದು ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ವೀಡಿಯೋ ಮೂಲಕ ಜಿಲ್ಲೆಯಲ್ಲಿ ಮೂವರು ಪಾಸಿಟಿವ್ ರೋಗಿಗಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಪಾಸಿಟಿವ್ ಉಳ್ಳವರ ಪ್ರಾಥಮಿಕ ಸಂಪರ್ಕವನ್ನು ಟ್ರಾಕ್ ಮಾಡಿದ್ದೇವೆ ಆದರೆ ಜನರು ಆತಂಕ ಪಡುವ ಅಗತ್ಯ ಇಲ್ಲ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ ಆದ್ದರಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಅನುಸರಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಾರ್ಚ್ 17 ರಂದು ದುಬೈ ನಿಂದ ಆಗಮಿಸಿದ ಉಡುಪಿಯ 35 ವರ್ಷದ ವ್ಯಕ್ತಿ ಕರೋನ ಲಕ್ಷಣ ಹಿನ್ನಲೆಯಲ್ಲಿ 27 ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಇಂದು ವರದಿ ಬಂದಿದ್ದು ಪಾಸಿಟಿವ್ ಆಗಿದೆ.
ಅದೇ ರೀತಿ ಕೆಲಸದ ಪ್ರಯುಕ್ತ ತ್ರಿವೇಂಡ್ರಮ್ ಗೆ ತೆರಳಿದ್ದ ಉಡುಪಿಯ 29 ವರ್ಷದ ವ್ಯಕ್ತಿ , ಕರೋನ ಲಕ್ಷಣ ಕಾರಣ ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದು , ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಇಂದು ವರದಿ ಪಾಸಿಟಿವ್ ಬಂದಿದೇ.ಇಬ್ಬರು ರೋಗಿಗಳನ್ನು ಮಣಿಪಾಲ ಆಸ್ಪತ್ರೆ ಗೆ ದಾಖಲು ಮಾಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.