ಉಡುಪಿಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ದೃಢ
ಉಡುಪಿ: ಇತ್ತೀಚೇಗೆ ದುಬೈ ನಿಂದ ಆಗಮಿಸಿದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಮಾರ್ಚ್ 18 ರಂದು ದುಬೈ ನಿಂದ ಬಂದಿದ್ದ ಉಡುಪಿ ಜಿಲ್ಲೆಯ 34 ವರ್ಷದ ವ್ಯಕ್ತಿ , ಜ್ವರದ ಕಾರಣ , ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು , ಈತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು , ಈತನ ಪ್ರಾಥಮಿಕ ವರದಿ ಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಪ್ರಾಥಮಿಕ ಮಾಹಿತಿಯಲ್ಲಿ ಕೋರೋನಾ ಇರೋದು ಸಾಬೀತಾಗಿದೆ ಆದರೆ ನನಗೆ ಇನ್ನೂ ಅಧಿಕೃತ ವೈದ್ಯಕೀಯ ವರದಿ ಕೈಗೆ ತಲುಪಿಲ್ಲ. ಈ ಕುರಿತು ರಾಜ್ಯದ ನೋಡೆಲ್ ಅಧಿಕಾರಿಗೆ ನಾನು ಮಾತನಾಡಿದ್ದೇನೆ ಡಾಕ್ಟರ್ ಅರುಂಧತಿ ಚಂದ್ರಶೇಖರ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು.
ವ್ಯಕ್ತಿಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದು ಆತ ಬಂದ ವಿಮಾನದ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಅಲ್ಲದೆದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ. ಆ ವ್ಯಕ್ತಿ ಏಳು ದಿನದಿಂದಲೂ ಕೂಡ ನಮ್ಮ ನಿಗಾದಲ್ಲೇ ಇದ್ದ ಕೋರನ ಸೋಂಕು ಇರುವ ವ್ಯಕ್ತಿ ದುಬೈನಿಂದ ಬಂದ ನಂತರ ಆತ ಕೆಲಸಕ್ಕೆ ಹೋಗಿಲ್ಲ ಮಡದಿ ಮತ್ತು ಮಗುವಿನ ಜೊತೆ ಕೂಡ ಸಂಪರ್ಕದಲ್ಲಿ ಇರಲಿಲ್ಲ ಮನೆಯಿಂದ ಜಿಲ್ಲಾಸ್ಪತ್ರೆಗೆ ಅವರು ಒಬ್ಬರೇ ಕಾರಿನಲ್ಲಿ ಬಂದಿದ್ದಾರೆ. ವೈದ್ಯಕೀಯ ವರದಿಯಲ್ಲಿ ಕರೋನಾ ದೃಢವಾದರೆ ರೋಗಿ ಕೆಎಂಸಿಗೆ ಶಿಫ್ಟ್ ಮಾಡಲಾಗುವುದು ಎಂದರು.