Home Mangalorean News Kannada News ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಹೋರಾಟಕ್ಕೆ ಪೊಲೀಸರ ಅನುಮತಿ ನಿರಾಕರಣೆ – ಕಾರ್ಯಕ್ರಮ ಮುಂದೂಡಿಕೆ

ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಹೋರಾಟಕ್ಕೆ ಪೊಲೀಸರ ಅನುಮತಿ ನಿರಾಕರಣೆ – ಕಾರ್ಯಕ್ರಮ ಮುಂದೂಡಿಕೆ

Spread the love

ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಹೋರಾಟಕ್ಕೆ ಪೊಲೀಸರ ಅನುಮತಿ ನಿರಾಕರಣೆ – ಕಾರ್ಯಕ್ರಮ ಮುಂದೂಡಿಕೆ

ಉಡುಪಿ: ಪೌರತ್ವ ಕಾಯಿದೆಯನ್ನು ವಿರೋಧಿಸಿ ಉಡುಪಿಯ ಕೆಲವೊಂದು ಸಂಘಟನೆಗಳು ಶನಿವಾರ ಆಯೋಜಿಸಿದ್ದ ಶಾಹಿನ್ ಬಾಗ್ ಮಾದರಿ ಹೋರಾಟಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಸತ್ಯಾಗ್ರಹವನ್ನು ಮುಂದೂಡಲಾಗಿದೆ.

ಶನಿವಾರ ಸಂಜೆ ಉಡುಪಿ ನಗರದ ವೆಂಕಟೇಶ್ವರ ಸ್ವೀಟ್ ಪಕ್ಕದ ನಿವೇಶನ, ಮಸೀದಿ ರಸ್ತೆಯ ಖಾಸಗಿ ಸ್ಥಳದಲ್ಲಿ ಪೌರತ್ವ ಕಾಯಿದೆಯನ್ನು ವಿರೋಧಿಸಿ ಶಾಹಿನ್ ಬಾಗ್ ಮಾದರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆಯೋಜಿಸಲಾಗಿತ್ತು. ಪೊಲೀಸ್ ಅನುಮತಿ ಸಿಗದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಅನಿರ್ದಿಷ್ಟಾವದಿ ಮುಂದೂಡಲಾಗಿದೆ ಎಂದು ಆಯೋಜಕರಲ್ಲಿ ಓರ್ವರಾದ ಸುಂದರ್ ಮಾಸ್ತರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


Spread the love

Exit mobile version