ಉಡುಪಿಯಲ್ಲಿ ಶೇ 40ರಷ್ಟು ಸೂರ್ಯಗ್ರಹಣ ಗೋಚರ
ಉಡುಪಿ: ಉಡುಪಿಯಲ್ಲಿ ನಭೋ ಮಂಡಲದಲ್ಲಿ ಅಪರೂಪದ ಕಂಕಣ ಸೂರ್ಯ ಗ್ರಹಣ ಶೇ 40ರಷ್ಟು ಗೋಚರವಾಗಿದೆ.
ಕುರುಕ್ಷೇತ್ರ, ಡೆಹ್ರಾಡೂನ್ ಗಳ ಸುಮಾರು 21 ಕೀಮೀಯಲ್ಲಿ ಸಂಪೂರ್ಣ ಕಂಕಣ ಗ್ರಹಣವಾದರೆ , ಅಲ್ಲಿಂದ ದಕ್ಷಿಣಕ್ಕೆ ವ್ಯಾಪಿಸುತ್ತಿದ್ದಂತೆ ಪಾರ್ಶ್ವ ಸೂರ್ಯ ಗ್ರಹಣ, ಅದರಲ್ಲೂ ಗ್ರಹಣವಾಗುವ ಅಂಶ ಕಡಿಮೆಯಾಗುತ್ತಾ, ಉಡುಪಿ ಯಲ್ಲಿ ಪಾರ್ಶ್ವ ಸೂರ್ಯ ಗ್ರಹಣ 40 ಅಂಶವಾಗಲಿದೆ ಎಂದು ಉಡುಪಿಯ ಭೌತ ವಿಜ್ಞಾನಿ ಡಾ. ಎ.ಪಿ ಭಟ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಬೆಳಿಗ್ಗೆ ಬೆಳಗ್ಗೆ 11.37ಕ್ಕೆ ಶೇಕಡಾ 40 ರಷ್ಟು ಗ್ರಹಣ ಗೋಚರವಾಗಿದೆ. ಕಳೆದ ಡಿಸೆಂಬರ್ 26ರ ಕಂಕಣ ಸೂರ್ಯ ಗ್ರಹಣ ಹಾಗೂ ಭಾನುವಾರದ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದು. ಹತ್ತು ವರ್ಷಗಳಲ್ಲೊಮ್ಮೆ ಪಾರ್ಶ್ವ ಸೂರ್ಯ ಗ್ರಹಣ ಸಂಭವಿಸಿದರೆ ನಮಗಿನ್ನು ಪುನಃ ಕಂಕಣ 2064ಕ್ಕೆ ಎಂದರು.
ಸೂರ್ಯ ಭೂಮಿಯ ನಡುವೆ ಚಂದ್ರ ನೇರ ಬಂದಾಗ ಸೂರ್ಯ ಗ್ರಹಣ ವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣ ವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕವನಾದುದರಿಂದ ಸೂರ್ಯ ಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ ಇರುತ್ತದೆ ಎಂದು ಮಾಹಿತಿ ನೀಡಿದರು.