Home Mangalorean News Kannada News ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ

ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ

Spread the love

ಉಡುಪಿಯಲ್ಲಿ  ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಬೀಡಿನಗುಡ್ಡೆ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಧ್ವಜಾರೋಹಣ ಮಾಡಿದರು ಮಾಡಿ ರಾಜ್ಯೋತ್ಸವದ ಸಂದೇಶ ನೀಡಿದರು.

ಈ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು ಸ್ವಾತಂತ್ರ್ದ ಬಳಿಕ ಕರ್ನಾಟಕ ಏಕೀಕರಣಕ್ಕಾಗಿ ನಾಡು-ನುಡಿಯ ಸ್ವಾಭಿಮಾನವನ್ನು ಕನ್ನಡಿಗರು ಮೆರೆದಿದ್ದಾರೆ. ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನ ಭಾಗವಾಗಿ  ಗುರುತಿಸಿಕೊಂಡಿದೆ. ತುಳು ಭಾಷೆ ಮುಖ್ಯ ಭಾಷೆಯಾದರೂ ಅಡಳಿತ, ಶಿಕ್ಷಣ ಭಾಷೆಆಗಿ ಕನ್ನಡವನ್ನೇ ಬಳಸಲಾಗುತ್ತಿದೆ. ಹೀಗಾಗಿ ತುಳು ಮತ್ತು ಕನ್ನಡ ಎರಡು ಕಣ್ಣುಕಳಿದ್ದಂತೆ. ಇದನ್ನು ಒಟ್ಟಾಗಿ ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯ ಎಂದರು.

ಕನ್ನಡ ಭಾಷೆ ಬಗ್ಗೆ ಜನರ ಮನೋಭಾವ ಬದಲಾಗುವ ಅಗತ್ವಿದೆ. ಇಂಗ್ಲಿಷ್ನಿಂದ ಕನ್ನಡಕ್ಕಿರುವ ಅಪಾಯಕ್ಕಿಂತಲೂ ಇಂಗ್ಲಿಷ್ ಕುರಿತ ಭ್ರಮೆ ಹೆಚ್ಚು ಅಪಾಯಕಾರಿ. ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕ ಮಹನೀರು ಮಹಾನ್ ವ್ಯಕಿತಗಳಾಗಿದ್ದಾರೆ. ಮಾತೃ ಭಾಷೆ ಬಲ್ಲವನು ಇತರ ಭಾಷೆ ಕಲಿಯಬಲ್ಲ. ಏಕರೂಪ ಶಿಕ್ಷಣದ ಬಗ್ಗೆ ಜನಾಭಿಪ್ರಾಯ ರೂಪುಗೊಳ್ಳಬೇಕಿದೆ. ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ದಿಟ್ಟಕ್ರಮ ಕೈಗೊಳ್ಳಬೇಕಿದೆ. ಭಾಷಾ ಬೆಳವಣಿಗೆ ದೃಷ್ಟಿಯಿಂದ ಇದು ಇಂದಿನ ಅಗತ್ಯ ಎಂದು ಅವರು ಹೇಳಿದರು.

ಜಾಗತೀಕರಣದಿಂದಾಗಿ ದೇಶಿ ಭಾಷೆಗಳಿಗೆ ಕುತ್ತು ಬರುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಗಂಭೀರ ಹೆಜ್ಜೆ ಇಡಬೇಕಿದೆ. ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿರುವುದು ಭಾಷಾ ಬೆಳವಣಿಗೆ ದೃಷ್ಟಿಇಂದ ಮಹತ್ವದ ಹೆಜ್ಜೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸುವ ದೃಷ್ಟಿಇಂದ ಕನ್ನಡ ಶಾಲೆಗಳನ್ನು ಸಬಲೀಕರಣಗೊಳೀಸಬೇಕಿದೆ. ಗುಣಮಟ್ಟವನ್ನು ಏರಿಸಬೇಕಿದೆ ಎಂದರು.

46 ಮಂದಿ ಸಾಧಕರಿಗೆ ಹಾಗೂ 6 ಸಂಘಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್ಪಿ ಡಾ. ಸಂಜೀವ ಎಂ. ಪಾಟೀಲ್, ಜಿಪಂ ಸಿಇಒ ಶಿವಾನಂದ ಕಾಪಶಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭಾಧ್ಯೆಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯೆಕ್ಷೆ ನಳಿನಿ ಪ್ರದೀಪ್ ರಾವ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಎನ್ ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಕಾರ್ಯಕ್ರಮಕ್ಕೂ ಮೊದಲು ಬೋರ್ಡ್ ಹೈಸ್ಕೂಲ್ನಿಂದ ಬೀಡಿನಗುಡ್ಡೆವರೆಗೆ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

 


Spread the love

Exit mobile version