Home Mangalorean News Kannada News ಉಡುಪಿಯಲ್ಲಿ ಸಿನಿಮೀಯ ಸ್ಟೈಲ್ ನಲ್ಲಿ ನಟೋರಿಯಸ್ ಕ್ರಿಮಿನಲ್ ಬಂಧನ!

ಉಡುಪಿಯಲ್ಲಿ ಸಿನಿಮೀಯ ಸ್ಟೈಲ್ ನಲ್ಲಿ ನಟೋರಿಯಸ್ ಕ್ರಿಮಿನಲ್ ಬಂಧನ!

Spread the love

ಉಡುಪಿಯಲ್ಲಿ ಸಿನಿಮೀಯ ಸ್ಟೈಲ್ ನಲ್ಲಿ ನಟೋರಿಯಸ್ ಕ್ರಿಮಿನಲ್ ಬಂಧನ!

ಉಡುಪಿ: ಉಡುಪಿಯಲ್ಲಿ ಸಿನಿಮೀಯ ಸ್ಟೈಲ್ ನಲ್ಲಿ ನಟೋರಿಯಸ್ ಕ್ರಿಮಿನಲ್ ಒರ್ವನನ್ನು ಮಣಿಪಾಲ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯು ಸರಣಿ ಅಪಘಾತ ನಡೆಸಿದ್ದು, ಉಡುಪಿಯ ಮಣಿಪಾಲದಲ್ಲಿ ಗರುಡ ಗ್ಯಾಂಗ್ ನ ಕುಖ್ಯಾತ ಸದಸ್ಯ ಇಸಾಕ್ ನನ್ನು ಸೆರೆ ಹಿಡಿಯಲಾಗಿದೆ.

ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಘಟನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸಲು ನೆಲಮಂಗಲ ಪೊಲೀಸರು ಆಗಮಿಸಿದ್ದರು.ನೆಲಮಂಗಲ ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಆರೋಪಿಯನ್ನ ಬೆಂಬಿಡದೆ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಸೀನಿಮಿಯ ರೀತಿಯಲ್ಲಿ ನಟೋರಿಯಸ್ ಕ್ರಿಮಿನಲ್ ನನ್ನ ಚೇಸ್ ಮಾಡಿ ಮಣಿಪಾಲ ಪೊಲೀಸರು ಸೆರೆ ಹಿಡಿದಿದ್ದಾರೆ.

ತಕ್ಷಣ ಮಣಿಪಾಲ ಪೊಲೀಸರಿಗೆ ನೆಲಮಂಗಲ ಪೊಲೀಸರಿಂದ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಮಣಿಪಾಲದ ಮಣ್ಣ ಪಳ್ಳದ ಬಳಿ ಗರುಡ ಗ್ಯಾಂಗ್ ನ ನಟೋರಿಯಸ್ ಸದಸ್ಯನನ್ನು ಬಂಧಿಸಿದ್ದಾರೆ.

ಪೊಲೀಸರು ಬೆನ್ನಟ್ಟುವ ವೇಳೆ ನಾಲ್ಕು ಕಾರು ಹಾಗು ಒಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನ ನಡೆಸಿದ್ದಾನೆ.ಕಾರಿನಲ್ಲಿ ಆರೋಪಿಯ ಜೊತೆ ಓರ್ವ ಯುವತಿ ಪತ್ತೆಯಾಗಿದ್ದು ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿರುವ ಕುರಿತು ಪೊಲೀಸರು ಇನ್ನಷ್ಟೇ ಸ್ಪಷ್ಟಪಡಿಸಬೇಕಾಗಿದೆ


Spread the love

Exit mobile version