Home Mangalorean News Kannada News ಉಡುಪಿ: ಅದಮಾರು ಸ್ವಾಮೀಜಿಯಿಂದ ವಿಎಚ್‍ಪಿ ಸ್ವಂತ  ಕಾರ್ಯಾಲಯ ಉದ್ಘಾಟನೆ

ಉಡುಪಿ: ಅದಮಾರು ಸ್ವಾಮೀಜಿಯಿಂದ ವಿಎಚ್‍ಪಿ ಸ್ವಂತ  ಕಾರ್ಯಾಲಯ ಉದ್ಘಾಟನೆ

Spread the love

ಉಡುಪಿ: ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿ ಆಹಾರ-ನೀರು-ಗಾಳಿಯನ್ನು ಸೇವಿಸುತ್ತಿರುವ ನಮಗೆ ನಮ್ಮ ದೇಶ ಎಂಬ ಭಾವನೆ ಇರಬೇಕು ಎಂದು ಶ್ರೀ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

vhp 4

ವಿಶ್ವ ಹಿಂದು ಪರಿಷದ್-ಬಜರಂಗದಳ, ಮಾತೃಮಂಡಳಿ, ದುರ್ಗಾ ವಾಹಿನಿ, ಗೋರಕ್ಷಾ,ಧರ್ಮ ಪ್ರಸಾರಣದ ಸ್ವಂತ ಕಾರ್ಯಾಲಯವನ್ನು ಮಂಗಳವಾರ ಕುಂಜಿಬೆಟ್ಟುವಿನ ಶ್ರೀ ಮಹಾಲಸಾ ದಾಮೋದರ ಟವರ್ಸ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ  ಹುಟ್ಟಿಬೆಳೆದವರೇ ನಮ್ಮ ದೇಶಕ್ಕೆ ಮಾರಕವಾಗುತ್ತಿದ್ದಾರೆ. ಅದನ್ನು ತಡೆಯಲು ದೇಶದ ರಕ್ಷಣೆಗಾಗಿ ನಾವೆಲ್ಲರೂ ಎದ್ದು ನಿಲ್ಲಬೇಕು. ಮನೆಮನೆಯಲ್ಲೂ ವಿಶ್ವ ಹಿಂದು ಪರಿಷದ್ ಕಾರ್ಯಾಲಯ ಮಾಡೋಣ ಎಂದರು. ಇದೇ ವೇಳೆ ಹಿಂದು ಭವನ ಕಟ್ಟಲು ಜಾಗ ನೀಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.

ಆರೆಸ್ಸೆಸ್ ಸಂಘಸಂಚಾಲಕ ಟಿ.ಶಂಭು ಶೆಟ್ಟಿ, ಉದ್ಯಮಿ ಎಂ.ಸೋಮಶೇಖರ ಭಟ್, ಆರೆಸ್ಸೆಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸುಬ್ರಹ್ಮಣ್ಯ ಹೊಳ್ಳ, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್, ಜಿಲ್ಲಾ ಸಂಚಾಲಕ ಸುನೀಲ್ ಕೆ.ಆರ್., ಮಾಜಿ ಶಾಸಕ ರಘುಪತಿ ಭಟ್, ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,  ಕೋಶಾಧಿಕಾರಿ ಮಟ್ಟಾರು ಗಣೇಶ ಕಿಣಿ, ಮಾತೃಮಂಡಳಿಯ ಪ್ರಮುಖ್ ಪದ್ಮಾ, ಗೋರಕ್ಷಣಾ ಪ್ರಮುಖ್ ವಿಜಯ ಶೆಟ್ಟಿ, ದುರ್ಗಾವಾಹಿನಿ ಪ್ರಮುಖ್ ರಮಾ ಜೆ.ರಾವ್, ಧರ್ಮಾಚಾರ್ಯ ಪ್ರಮುಖ್ ಎಂ. ಲಕ್ಷ್ಮಿನಾರಾಯಣ ರಾವ್, ಉಪಾಧ್ಯಕ್ಷರಾದ ನಾರಾಯಣ ಮಾನ್ಯ, ಸುಪ್ರಭಾ ಆಚಾರ್ಯ, ಉಮೇಶ ಶೆಟ್ಟಿ ಉಪಸ್ಥಿತರಿದ್ದರು.

ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ ಗೋರಕ್ಷಣೆ, ಹಿಂದು  ಭವನ ನಿರ್ಮಾಣದ ಸಂಕಲ್ಪ ಹೊಂದಿz್ದÉೀವೆ ಎಂದರು. ಕಾರ್ಯದರ್ಶಿ ರತ್ನಾಕರ ಅಮೀನ್ ವಂದಿಸಿದರು.


Spread the love

Exit mobile version