ಉಡುಪಿ: ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ – ಮೂವರ ಬಂಧನ
ಉಡುಪಿ: ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು ರೂ,12,16,700/- ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕುಂದಾಪುರ ತಾಲೂಕು ಬೇಳೂರು ನಿವಾಸಿ ಶ್ರೀರಾಜ್(33), ಕೊರ್ಗಿ ನಿವಾಸಿ ಸಂದೀಪ್ (34) ಮತ್ತು ಮೊಳಹಳ್ಳಿ ನಿವಾಸಿ ಮಧುಕರ್ (44) ಎಂದು ಗುರುತಿಸಲಾಗಿದೆ.
ಸೆನ್ ಪೊಲೀಸ್ ಉಪಾಧೀಕ್ಷಕರಾದ ಎ.ಸಿ ಲೋಕೇಶ್ ಮತ್ತು ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಎ.ಎಸ್.ಐ ಉಮೇಶ್ ಮತ್ತು ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಘವೇಂದ್ರ, ರಾಜೇಶ್, ಸಂತೋಷ, ಅರುಣ್ ಕುಮಾರ್, ದಿಕ್ಷೀತ್ , ನಿಲೇಶ್, ಪವನ್, ಮಾಯಪ್ಪ, ಜ್ಯೋತಿ, ವೈಶಾಲಿರವರನ್ನೊಳಗೊಂಡ ತಂಡ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ PARKER ಎಂಬ ಬೆಟ್ಟಿಂಗ್ ಮೊಬೈಲ್ ಆ್ಯಪ್ನ ಸಹಾಯದಿಂದ ತಮ್ಮಲ್ಲಿರುವ ಸ್ಮಾರ್ಟ್ ಫೋನ್ ಮೂಲಕ ಎಪ್ರಿಲ್ 23 ರಂದು ಹೈದರಾಬಾದಿನ ರಾಜೀವ್ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ SRH (ಸನ್ ರೈಸರ್ಸ್ ಹೈದರಾಬಾದ್) ಮತ್ತು MI (ಮುಂಬೈಇಂಡಿಯನ್ಸ್) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್ಗೆ ಸಂಬಂಧಪಟ್ಟು, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದ ಮೂವರು ಆರೋಪಿಗಳು ಕುಂದಾಪುರ ಇವರು ಆಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.
ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡವನ್ನು ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿ ಕೊಟ್ಟಿದ್ದು, ಇವರ ಬಳಿ ಸಾರ್ವಜನಿಕರಿಂದ ಆಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಸಂಗ್ರಹ ಮಾಡಿದ ನಗದು ಹಣ ರೂ.81,700/-, 4 ಮೊಬೈಲ್ ಅಂದಾಜು ಮೌಲ್ಯ ರೂ. 1,35,000/-, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕೆಎ-20-ಎಂ.ಎಫ್-1440 ನೇ ಕಾರು ಮೌಲ್ಯ ರೂ.10,00,000/-ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 14/2025 ಕಲಂ: 78 KP ACT ಮತ್ತು112 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮೇ 6ರ ತನಕ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.