ಉಡುಪಿ :– ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಏಪ್ರಿಲ್ 30ರೊಳಗೆ ಸಂಪೂರ್ಣಗೊಳಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶಿಸಿದರು.
ಅವರು ಇಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಗಣತಿ ಪ್ರಗತಿ ಸಂಬಂಧ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ವೇಳೆ ಮೇಲ್ಕಂಡಂತೆ ಆದೇಶ ನೀಡಿದರು.
ಗಣತಿಯನ್ನು ನಿಯೋಜಿತ ಹಾಗೂ ತರಬೇತಿ ಪಡೆದ ಶಿಕ್ಷಕರೇ ನಡೆಸಬೇಕು. ಈ ಬಗ್ಗೆ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೇ ಖುದ್ದು ಭೇಟಿ ನೀಡಿ ಗಣತಿ ಕಾರ್ಯದ ಪರಿಶೀಲನೆ ನಡೆಸಬೇಕೆಂದರು.
ಪೆನ್ಸಿಲ್ ನಿಂದ ಮಾಹಿತಿ ತುಂಬದಂತೆ ಹಾಗೂ ಎಲ್ಲ ಕಲಂಗಳನ್ನು ಪೂತರ್ಿ ಮಾಡುವಂತೆ ಸೂಚನೆ ನೀಡಬೇಕು. ತಪ್ಪು ಮಾಹಿತಿ ನೀಡಿಕೆ ಹಾಗೂ ಸಂಗ್ರಹ ಅಪರಾಧ ಎಂಬುದನ್ನು ಪ್ರತಿಯೊಬ್ಬರು ಅರಿತು ಮಾಹಿತಿ ನೀಡಬೇಕೆಂದರು. ಮಾಹಿತಿ ಕಡ್ಡಾಯ ಕೊಡಿ ಎಂದು ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿ ಎಂದು ಹೇಳಿದರು.
ಉಡುಪಿ: ಎಪ್ರಿಲ್ 30ರೊಳಗೆ ಸಮೀಕ್ಷೆ ಮುಗಿಸಿ: ಸಿ ಎಂ ಸಿದ್ಧರಾಮಯ್ಯ
Spread the love
Spread the love