ಉಡುಪಿ: ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮದ ಅಂಗವಾಗಿ, ಲಯನ್ಸ್ ಕ್ಲಬ್ ಪರ್ಕಳ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ ಸೆಮಿ ಕ್ಲಾಸಿಕಲ್ ರಾಧಾ ಕೃಷ್ಣ ಸ್ಪರ್ಧೆ ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಉದ್ಯಮಿ, ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಸುರೇಶ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ, ವ್ಯಾಪಾರ ವ್ಯವಹಾರದ ಜೊತೆಗೆ, ಸಾಮಾಜಿಕ ಕಾರ್ಯಕ್ರದಲ್ಲಿಯೂ ಎಸ್ಕೆಪಿಎ ತೊಡಗಿಸಿಕೊಳ್ಳುವುದು ವಿಶೇಷವಾಗಿದೆ.ಕಲೆ- ಸಂಸ್ಕøತಿ ಉಳಿಸಿ, ಬೆಳೆಸುವುದರ ಜೊತೆಗೆ ಅರಳುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಕೆಪಿಎ ಅಧ್ಯಕ್ಷ ವಾಸುದೇವ ರಾವ್ ಕೆ., ಎಸ್ಕೆಪಿಎ ಸಂಸ್ಥೆ ಅವಿಭಜಿತ ಜಿಲೆಯ 14 ವಲಯಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಿರತವಾಗಿದೆ. ದೇಶೀಯ ಕಲೆ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಲಯನ್ಸ್ನ ಗಂಗಾಧರ ಭಿರ್ತಿ, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್, ಎಸ್ಕೆಪಿಎ ಉಪಾಧ್ಯಕ್ಷ ಪದ್ಮ ಪ್ರಸಾದ್ ಜೈನ್, ಸಾಂಸ್ಕøತಿಕ ಕಾರ್ಯದರ್ಶಿಗಳಾದ ದತ್ತಾತ್ರೇಯ ಕಾರ್ಕಳ, ದಯಾನಂದ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಉಡುಪಿ ವಿಭಾಗದ ಕಾರ್ಯದರ್ಶಿ ದಿನೇಶ್ ಕಾಂಚನ್ ಉಪಸ್ಥಿತರಿದ್ದರು.
ಜನಾರ್ದನ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಶೆಟ್ಟಿಗಾರ್ ವಂದಿಸಿದರು. ಬಳಿಕ ವಿವಿಧ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.