ಉಡುಪಿ: ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಉಡುಪಿ ವಿಭಾಗೀಯ ಮಟ್ಟದ 14ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನ ಎಪ್ರಿಲ್ 10ರಂದು ಬನ್ನಂಜೆ ನಾರಾಯಣ ಗುರು ಮಂದಿರದ “ಶಿವಗಿರಿ ಸಭಾಗೃಹ”ದಲ್ಲಿ “ಎಚ್.ಕೆ.ಎಸ್. ಅರಸ್ ವೇದಿಕೆ”ಯಲ್ಲಿ ಬೆಳಿಗ್ಗೆ 09.30ಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳಲಿದೆ.
ಬಹಿರಂಗ ಸಮ್ಮೇಳನವನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಗೌರವಾನ್ವಿತ ಲೋಕಸಭಾ ಸದಸ್ಯರಾದ ಮಾನ್ಯ ಶೋಭಾ ಕರಂದ್ಲಾಜೆ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರೂಪ್ ಸಿ ಸಂಘದ ಅಧ್ಯಕ್ಷರಾದ ಮಾಧವ ಅಡಿಗ ಎಚ್. ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪ್ರಮೋದ್ ಮಧ್ವರಾಜ್, ಗೌರವಾನ್ವಿತ ಸಂಸದೀಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕರ್ನಾಟಕ ಸರಕಾರ ಹಾಗೂ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ, ಡಾ|| ರವೀಂದ್ರನಾಥ ಶ್ಯಾನುಭಾಗ್, ಮಾನ್ಯ ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ (ರಿ) ಉಡುಪಿ, ಶ್ರೀ ಕೆ.ಎಸ್. ಶೆಟ್ಟಿ, ಐ.ಪಿ.ಎಸ್, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರು, ಶ್ರೀ ರಾಜಶೇಖರ ಭಟ್, ಮಾನ್ಯ ಅಂಚೆ ಅಧೀಕ್ಷಕರು, ಉಡುಪಿ ವಿಭಾಗ, ಶ್ರೀ ಬಿ. ಶಿವಕುಮಾರ್, ವಲಯ ಕಾರ್ಯದರ್ಶಿಗಳು, ಗ್ರೂಪ್ ಸಿ ಬೆಂಗಳೂರು, ಶ್ರೀ ಕೆ. ಸಿ . ಗಂಗಯ್ಯ, ವಲಯ ಕಾರ್ಯದರ್ಶಿ, ಪೋಸ್ಟ್~ಮ್ಯಾನ್-ಎಮ್.ಟಿ.ಎಸ್., ಬೆಂಗಳೂರು, ಶ್ರೀ ಕೆ.ವಿ.ಕುರುಡುಗಿ, ಸಹಾಯಕ ಪ್ರಧಾನ ಕಾರ್ಯದರ್ಶಿ, ಪೋಸ್ಟ್ ಮೆನ್ – ಎಮ್.ಟಿ.ಎಸ್. ನವದೆಹಲಿ, ಇವರು ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತಿ: ಶ್ರೀ ಎನ್. ದಯಾನಂದ, ನಿಕಟಪೂರ್ವ ಅಧ್ಯಕ್ಷರು, ಗ್ರೂಪ್ ಸಿ, ಬಿ ಮಂಜುನಾಥ್ ಭಟ್, ಮಾಜಿ ಅಧ್ಯಕ್ಷರು, ಗ್ರೂಪ್ ಸಿ, ಪಿ. ಎಸ್. ರಾಜಾರಾವ್, ಹಿರಿಯ ನೇತಾರರು, ಬೆಂಗಳೂರು
ಈ ಸಂದರ್ಭದಲ್ಲಿ “ಹೆಚ್.ಕೆ.ಎಸ್. ಅರಸ್” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಅಲ್ಲದೆ ನಿವೃತ್ತಿ ಹೊಂದಿದ, ಪದೋನ್ನತಿ ಹೊಂದಿದ ಸಾಧಕರನ್ನು ಸನ್ಮಾನಿಸಲಾಗುವುದು.ಮಧ್ಯಾಹ್ನದ ವಿಷಯ ನಿಯಮಾವಳಿ ಸಭೆಯಲ್ಲಿ, ನೌಕರರ ಕುಂದು ಕೊರತೆಗಳು, ಇಲಾಖೆಯ ಆಗುಹೋಗುಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಗುವುದು, ಎಂಬುದಾಗಿ ಸಂಘಗಳ ಪದಾಧಿಕಾರಿಗಳ ಪ್ರಕಟನೆಯಲ್ಲಿ ತಿಳಿಸಿರುತ್ತದೆ.