Home Mangalorean News Kannada News ಉಡುಪಿ: ಒಳಕಾಡು ಸರಕಾರಿ ಸಂಯುಕ್ತ ಹೈಸ್ಕೂಲಿನಲ್ಲಿ ಶಾಲಾ ಪ್ರಾರಂಭೋತ್ಸವ

ಉಡುಪಿ: ಒಳಕಾಡು ಸರಕಾರಿ ಸಂಯುಕ್ತ ಹೈಸ್ಕೂಲಿನಲ್ಲಿ ಶಾಲಾ ಪ್ರಾರಂಭೋತ್ಸವ

Spread the love

 ಉಡುಪಿಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು ಇಲ್ಲಿ 2015-16 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ದಿನಾಂಕ 01-06-2015ರಂದು ಅದ್ದೂರಿಯಾಗಿ ನಡೆಯಿತು. ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಗೀತಾ ರವಿ ಶೇಟ್ ದೀಪ ಬೆಳಗಿಸಿ ಪ್ರಾರಂಭೋತ್ಸವವನ್ನು ಉದ್ಘಾಟಿಸಿದರು ಹಾಗೂ ಸರಕಾರದ ವತಿಯಿಂದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಹಿತನುಡಿದರು.

ವಳಕಾಡು

 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಇಂದು ರಮಾನಂದ ಭಟ್‍ರವರು ಶಾಲಾ ಹಳೆ ವಿದ್ಯಾರ್ಥಿ ಸಂಧ್ಯಾ ಡಿ. ರಾವ್ ಪ್ರಾಯೋಜಿಸಿರುವ ‘ಕನ್ನಡದ ಮೂಲಕ ಇಂಗ್ಲಿಷ್ ಕಲಿಕೆ ’ಪುಸ್ತಕವನ್ನು 8ನೇ ತರಗತಿಯ 200 ವಿದ್ಯಾರ್ಥಿಗಳಿಗೆ ವಿತರಿಸಿದರು. ಶಾಲಾ ಹಳೆವಿದ್ಯಾರ್ಥಿಗಳಾದ ಸದಾನಂದ ಶೆಣೈ, ಅಮೃತ್ ಶೆಣೈ, ಅಜಿತ್ ರಾವ್, ಸತೀಶ್ ಶೇಟ್, ಆದರ್ಶ ರಾವ್ ನೀಡಿರುವ ಉಚಿತ ನೋಟ್ಸು ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ ಶಾಲಾ ಪ್ರಾರಂಭೋತ್ಸವದ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಾದ ಅನ್ನಪೂರ್ಣ ಐತಾಳ್, ಉಮೇಶ್ ನಾಯಕ್, ಸದಾನಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ಸ್ವಾಗತಗೈದರು. ಶಿಕ್ಷಕಿ ರೂಪರೇಖಾ ವಂದಿಸಿದರು. ವಿದ್ಯಾರ್ಥಿಗಳಾದ ರಾಖಿ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿದರು.

 

 


Spread the love

Exit mobile version