ಉಡುಪಿ: ಕಾರ್ಮಿಕರು ಮತ್ತು ಮಾಲಿಕರು ಒಂದೆ ನಾಣ್ಯದ ಎರಡು ಮುಖಗಳಾಗಿದ್ದು ಕಾರ್ಮಿಕರ ಹಿತರಕ್ಷಣೆಗೆ ಪ್ರತಿ ಯೊಬ್ಬ ಮಾಲಿಕನು ಭದ್ದವಾಗಿರಬೇಕು. ಮಾಲಿಕರ ಏಳಿಗೆ ಮತ್ತು ಸಾಧನೆಗಳಿಗೆ ಕಾರಣ ಕಾರ್ಮಿಕ ಶ್ರಮದ ಫಲ ಎಂದು ನಗರಾಬಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಜನಾರ್ಧನ್ ತೋನ್ಸೆ ಹೇಳಿದರು.
ಕರ್ನಾಟಕ ಕಾರ್ಮಿಕ ವೇದಿಕೆ ಕನ್ನಡ ರಾಜ್ಯೋತ್ಸವ, ರಾಜ್ಯ ಮಟ್ಟದ ಬೃಹತ್ ಕಾರ್ಮಿಕರ ಜನಜಾಗೃತಿ ಸಮಾವೇಶ ಹಾಗೂ ಉದ್ಯೋಗಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ದೌರ್ಜನ್ಯಗಳಿಗೆ ಉತ್ತರ ಸಿಗುವಂತಾಗಬೇಕು. ಕಾರ್ಮಿಕರ ಪರ ಹೊರಾಟ ನಡೆಸಿ ಅವರ ಹಿತಕ್ಕೆ ಬದ್ದವಾಗಿ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ ಯುವಜನರಲ್ಲಿ ಹೊಸ ಹುರುಪು ತುಂಬುತ್ತಿದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆ ಸಂಘಟನೆ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.
ಧ್ವಜಾರೋಹಣ ನಡೆಸಿ ಮಾತನಾಡಿದ ಕರ್ನಾಟಕ ಕಾರ್ಮಿಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ಬಿ ನಾಗೇಶ್ ಕನ್ನಡ ಭಾಷೆ,ಕೂಲಿ ಕಾರ್ಮಿಕ, ರೈತರ ಶ್ರೆಯೋಬಿವೃದ್ದಿಗಾಗಿ ಕರ್ನಾಟಕ ಕಾರ್ಮಿಕರ ವೇದಿಕೆ ಸ್ಥಾಪಿತವಾಗಿದೆ ಎಂದರು ಈ ನಿಟ್ಟಿನಲ್ಲಿ ವೇದಿಕೆಯು ಶೋಷಿತರ ದನಿಯಾಗಿ ಹೊರಾಟ ಮಾಡುತ್ತ ನೊಂದ ಜೀವಗಳಿಗೆ ಆಸರೆಯಾಗಿ ಸಮಾಜಿಕ ಸೇವ ಮನೊಭಾವದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕರ್ನಾಟಕ ಕಾರ್ಮಿಕ ವೇದಿಕೆ ಇದರ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮಾತನಾಡಿ ಕರ್ನಾಟಕ ಕಾರ್ಮಿಕ ವೇದಿಕೆಯು ಕೇವಲ ಕಾರ್ಮಿಕರ ಹಿತಕ್ಕಾಗಿ ಕಾರ್ಯ ನಿರ್ವಹಿಸದೆ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ, ಕಾರ್ಮಿಕರಿಗೆ ವಿಮೆ ಸೌಲಭ್ಯ, ಮಾಲಿಕರ ಕಾರ್ಮಿಕರ ನಡುವಿನ ಸಮನ್ವಯತೆ ಕಾಪಡುವುದು ಜೊತೆಗೆ ಕಾರ್ಮಿಕರಲ್ಲಿ ಸ್ವಚ್ಚತೆ,ಕಾನೂನು ಬಗ್ಗೆ ಅರಿವು ಮೂಡಿಸಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಎಲ್ಲೆಡೆ ನಡೆಸುತ್ತಿದೆ.
ಸಮಾವೇಶದಲ್ಲಿ ಕವಿಗೋಷ್ಠಿ, ರೈತರಿಗಾಗಿ ಕೃಷಿ ಮಾಹಿತಿ ಮತ್ತು ಕಾರ್ಮಿಕರ ಸದಸ್ಯತ್ವ ನೋಂದಾವಣೆ ಕೇಂದ್ರ ಸ್ಥಾಪಿಸಲಾಗಿತ್ತು, ಕಾರ್ಮಿಕರಿಗಾಗಿ ಕಿದಿಯೂರು ಉದಯïಕುಮಾರóï ಫ್ಯಾಮಿಲಿ ಟ್ರಸ್ಟ್ ವತಿಯಿಂದ ಉಚಿತ ಫ್ರಧಾನ ಮಂತ್ರಿ ವಿಮೆ ಯೋಜನೆ, ಕಾರ್ಮಿಕರಿಗೆ ಉಚಿತ ಬ್ಯಾಂಕ್ ಖಾತೆ ವ್ಯವಸ್ಥೆ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ವಿಮಾ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಉದ್ಯೋಗ ಮೇಳ ಪ್ರಮುಖ ಆಕರ್ಷಣೆಯಾಗಿದ್ದು ಸುಮಾರು 40 ರಾಷ್ಟ್ರಿಯ ಅಂತಾರಾಷ್ಟ್ರಿಯ ಐ.ಟಿ,ಐ ಕಾಮರ್ಸ್, ಬ್ಯಾಂಕಿಂಗ್, ಬಿ.ಪಿ.ಒ ಕಂಪೆನಿಗಳು ಪಾಲ್ಗೋಂಡಿದ್ದವು ಬೃಹತ್ ಸಂಖ್ಯೆಯ ಉದ್ಯೋಗಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಿದ್ದರು.
ಸಮಾವೇಶದಲ್ಲಿ ಕ.ಸ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ, ರಾಷ್ಟ್ರಿಯ ಮಾನವ ಹಕ್ಕು ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಇನ್ನ ಉದಯ್ ಕುಮಾರ್ ಶೆಟ್ಟಿ,ರಾಜ್ಯ ದಸಂಸ ಮುಖಂಡ ಡಿಎಸ್ ಎಸ್ ಮೂರ್ತಿ, ಕರ್ನಾಟಕ ಕಾರ್ಮಿಕ ವೇದಿಕೆ ಉಪಾಧ್ಯಕ್ಷ ಕೆ ಸುರೇಶ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿ ರವಿ ಶಾಸ್ತ್ರಿ ಬನ್ನಂಜೆ, ಬೆಳಗಾವಿ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಚಿ. ಮಚ್ಚಿನಾರ್, ರೈತ ಕಾರ್ಮಿಕ ಘಟಕದ ವೀರಣ್ಣ ಕುರುವತ್ತಿ ಗೌಡರ್, ವೇದಿಕೆಯ ಪದ್ನನಾಭ ಪ್ರಸನ್ನ ಕುಮಾರ್, ಪಧಾದಿಕಾರಿಗಳಾದ ರಕ್ಷಿತ್ ಶೆಟ್ಟಿ, ಗೌತಮ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಪ್ರಾಸ್ಥಾವಿಕ ಮಾತನಾಡಿದರು, ಮಹಿಳಾ ಘಟಕ ಅಧ್ಯಕ್ಷೆ ಚಂದ್ರಿಕ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು