ಉಡುಪಿ: ಕಾರ್ಮಿಕರ ವಿಮಾ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ (ಉಡುಪಿ ಜಿಲ್ಲೆ)ಯ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗವು ದಿನಾಂಕ 22.09.2015 ರಂದು ಉಡುಪಿ ಜಿಲ್ಲಾ ಕಾರ್ಮಿಕರ ವಿಮಾ ಆಸ್ಪತ್ರೆಯ ಕಛೇರಿಗೆ ಭೇಟಿ ನೀಡಿ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿತು.
ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿಶೆಟ್ಟಿಯವರು ವೈದ್ಯಾಧಿಕಾರಿಗಳಿಗೆ ಸರಿಯಾದ ವ್ಯವಸ್ಥೆಯನ್ನು ತಕ್ಷಣ ಮೇಲಾಧಿಕಾರಿಗಳಿಗೆ ತಿಳಿಸಿ ಸರಿಪಡಿಸುವಂತೆ ಹಾಗೂ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡಿ, ಔಷಧಿ ವಿತರಣೆಯ ಸಮಯದಲ್ಲಿ ಜಾಗೃತಿ ವಹಿಸುವಂತೆ ಎಚ್ಚರಿಕೆಯನ್ನು ನೀಡಿದರು.
ಕಾರ್ಮಿಕರ ವಿಮಾ ಆಸ್ಪತ್ರೆಯು ವೈದ್ಯರು, ಶುಶ್ರುಕಿಯರು ಹಾಗೂ ಹಲವು ನೌಕರರ ಅಭಾವ ಎದುರಿಸುತಿದ್ದು ಮತ್ತು ಆಸ್ಪತ್ರೆಗೆ ಬರುವುದರಲ್ಲಿ ಮೂಳೆ ಮುರಿತಕ್ಕೆ ಒಳಪಟ್ಟವರೇ ಹೆಚ್ಚಾಗಿದ್ದೂ, ಒಂದನೆ ಮಹಡಿಗೆ ಹೋಗಲು ಯಾವುದೇ ರೀತಿಯ ವ್ಯವಸ್ಥೆ ಇಲ್ಲದಿರುವುದು, ಇದನೆಲ್ಲಾ ಸರಿಪಡಿಸುವಂತೆ ಕೋರಿ ಮಾನ್ಯ ಜಿಲ್ಲಾಧಿಕಾರಿಗಳು, ಕಾರ್ಮಿಕ ಸಚಿವರು, ಮತ್ತು ಕಾರ್ಮಿಕರ ಇಲಾಖೆಗೆ ಅಂಚೆ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯ ಉಪಾಧ್ಯಕ್ಷರಾದ ಸುರೇಶ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿ ರವಿಶಾಸ್ತ್ರಿ ಬನ್ನಂಜೆ, ಕಾರ್ಯದರ್ಶಿ ಮೊಹಮ್ಮದ್ ಆರೀಫ್, ಉಪಕಾರ್ಯದರ್ಶಿ ಪ್ರವೀಣ್ ಹಿರಿಯಡ್ಕ, ಅಲ್ಪಸಂಖ್ಯಾತರ ಮುಖಂಡ ಮೊಹಮ್ಮದ್ ನಬೀಲ್, ಸ್ವಯಂ ಸೇವಕ ಮುಖಂಡ ಅರವಿಂದ್, ಜಾವಿದ್, ಸಂಜೀವ್ ಶೆಟ್ಟಿ, ಸ್ಯಾಮುವೆಲ್, ಕುಮಾರಿ ದೀಕ್ಷಿತಾ, ಮತ್ತು ಪವಿತ್ರಾ, ಹಲವರು ಉಪಸ್ಥಿತರಿದ್ದರು.