ಉಡುಪಿ: ಕಿಡಿಗೇಡಿಗಳು ಶಾಲೆಯ ಧ್ವಜಸ್ಥಂಭ ಹಾಗೂ ಮಕ್ಕಳ ಪಾರ್ಕನ್ನು ಜೆಸಿಬಿ ಮೂಲಕ ಹಾಳುಗೇಡವಿದ ಘಟನೆ ಕಾರ್ಕಳ ತಾಲೂಕಿನ ರಂಗನಪಲ್ಕೆ ಕಣಜಾರು ಬಳಿಯ ಲಿಟ್ಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 13 ವರ್ಷಗಳಿಂದ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ಎಲ್ ಕೆ ಜಿಯಿಂದ ಹಿಡಿದು ಎಸ್ ಎಸ್ ಎಲ್ ಸಿ ವರೆಗೆ ಆಂಗ್ಲ ಮಾಧ್ಯಮ ಶಾಲೆಯು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಸತತವಾಗಿ ನಾಲ್ಕು ವರ್ಷಗಳಿಂದ ಶೇಕಡಾ ನೂರು ಫಲಿತಾಂಶವನ್ನು ದಾಖಲಿಸಿದೆ.
ಎಪ್ರಿಲ್ 25 ರಂದು ಶಾಲಾ ಸ್ಥಳದ ದಾನಿಗಳಾದ ಲಾರೆನ್ಸ್ ಸಲ್ಡಾನಾ ಮತ್ತು ಅವರ ಚಿಕ್ಕಮ್ಮನ ಮಗ ಮೆಲ್ವಿನ್ ಹಾಗೂ ಅವರ ಹಿಂಬಾಲಕರು ಶಾಲಾ ಆವರಣದ ಒಳಗೆ ಬಲತ್ಕಾರವಾಗಿ ಪ್ರವೇಶ ಮಾಡಿ ಜೆಸಿಬಿ ಮೂಲಕ ಮಕ್ಕಳ ಪಾರ್ಕ್ ಹಾಗೂ ಧ್ವಜಕಟ್ಟೆ ನೀರಿನ ಟ್ಯಾಂಕ್ ಶೌಚಾಲಯವನ್ನು ಹಾಳುಗೆಡವಿದ್ದಾರೆ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸದ್ದಾರೆ. ಇದರಿಂದ ಬೇಸತ್ತ ಪೋಷಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.