ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಅಲ್ಪಸಂಖ್ಯಾತ ಇಲಾಖೆಯಿಂದ ಲಭಿಸುವ ಸರಕಾರ ವಿವಿಧ ವಿದ್ಯಾರ್ಥಿ ವೇತನ ಮತ್ತು ಸವಲತ್ತುಗಳ ಕುರಿತಾದ ಮಾಹಿತಿ ಕಾರ್ಯಾಗಾರ ಡೊನ್ ಬೊಸ್ಕೊ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಧರ್ಮಪ್ರಾಂತ್ಯದ ಸಮುದಾಯ ಸಶಕ್ತಿಕರಣ ವಿಭಾಗದ ನಿರ್ದೇಶಕರಾದ ವಂ ರೆಜಿನಾಲ್ಡ್ ಪಿಂಟೊ ಉದ್ಘಾಟಿಸಿ ಕ್ರೈಸ್ತ ಸಮುದಾಯ ಸರಕಾರದಿಂದ ಲಭಿಸುವ ವಿವಿಧ ಸವಲತ್ತುಗಳನ್ನು ಪಡೆಯುವಲ್ಲಿ ಆಸಕ್ತಿ ತೋರಿಸುವುದರೊಂದಿಗೆ ಸಮಾಜದಲ್ಲಿ ಸ್ವಾವಲಂಭಿಗಳಾಗಿ ಬದಕಲು ಪ್ರಯತ್ನಿಸಬೇಕು. ತಾವು ಸವಲತ್ತುಗಳನ್ನು ಪಡೆದಂತೆ ಇತರ ಅಶಕ್ತ ಅಲ್ಪಸಂಖ್ಯಾತ ಭಾಂಧವರು ಸಹ ಇಂತಹ ಸೌಲ್ಯಭ್ಯಗಳನ್ನು ಪಡೆಯಲು ಅವರಿಗೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಕ್ರಿಶ್ಚಿಯನ್ ಸಮುದಾಯವರಿಗೆ ಲಭಿಸುವ ವಿವಿಧ ವಿದ್ಯಾರ್ಥಿವೇತನ, ಸಾಲ ಸೌಲಭ್ಯ ಇತ್ಯಾದಿಗಳ ಕುರಿತಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಜಯ್ ಡಿ’ಸೋಜಾ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಡುಪಿ, ಕುಂದಾಪುರ, ಕಾರ್ಕಳ, ಕಲ್ಯಾಣಪುರ ಹಾಗೂ ಶಿರ್ವ ವಲಯದ ಕೆಥೊಲಿಕ್ ಸಭಾ ಪ್ರತಿನಿಧಿಗಳು ಹಾಜರಿದ್ದು ಮಾಹಿತಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾದ ಆಧ್ಯಕ್ಷ ವಿಲಿಯಂ ಮಚಾದೊ, ಕಾರ್ಯದರ್ಶಿ ಅಲಿಸ್ ರೊಡ್ರಿಗಸ್, ನಿಕಟಪೂರ್ವ ಅಧ್ಯಕ್ಷ ಎಲ್ರೊಯ್ ಕಿರಣ್ ಕ್ರಾಸ್ತಾ ಇನ್ನಿತರರು ಉಪಸ್ಥಿತರಿದ್ದರು.