ಉಡುಪಿ: ಜಿಲ್ಲೆಯಲ್ಲಿ ಮೇ 29 ರಂದು ನಡೆಯುವ ಗ್ರಾ. ಪಂ ಚುನಾವಣೆಯಲ್ಲಿ ಕುಂದಾಪುರದ 291 (ಅವಿರೋಧ 36), ಉಡುಪಿ 374 (ಅವಿರೋಧ 20), ಕಾರ್ಕಳ 172 ( ಅವಿರೋಧ 14) ಸೇರಿದಂತೆ ಒಟ್ಟು 837 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ಕುಂದಾಪುರದಲ್ಲಿ 117876 (ಗಂಡು), 127962 (ಹೆಣ್ಣು), (ತೃತೀಯ ಲಿಂಗ) 17 ಸೇರಿದಂತೆ ಒಟ್ಟು 245855 ಮತದಾರರು ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಆರ್ ವಿಶಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿ 147950 ಗಂಡು, 163422 ಹೆಣ್ಣು, ತೃತೀಯ ಲಿಂಗ 8 ಸೇರಿದಂತೆ ಒಟ್ಟು 311380 ಮತದಾರರು, ಕಾರ್ಕಳದಲ್ಲಿ 66360 ಗಂಡು, 73658 ಹೆಣ್ಣು ಸೇರಿದಂತೆ ಒಟ್ಟು 140018 ಮತದಾರರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 332186 ಗಂಡು, 365042 ಹೆಣ್ಣು, 25 ತೃತೀಯ ಲಿಂಗ ಸೇರಿದಂತೆ ಒಟ್ಟು 697523 ಮತದಾರರು ಮತದಾನದಲ್ಲಿ ಭಾಗವಹಿಸಲಿದ್ದು, ಮೇ 18 ರವರೆಗಿನ ಮತದಾನದ ವಿವರಗಳನ್ನು ಗಣನೆಗೆ ತೆಗೆದುಕೊಂಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ ಮತ್ತು ಆಯಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಪರಿಶೀಲಿಸಬಹುದಾಗಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ ವೋಟರ್ ಸ್ಲಿಪ್ ನೀಡಲಾಗುವುದಿಲ್ಲ, ಮತದಾನವು ಕಡ್ಡಾಯವಾಗಿದ್ದು, ಮತ ಚಲಾಯಿಸಲು ಮತದಾರ ಸ್ವತಂತ್ರವಾಗಿದ್ದು ‘ನೋಟಾ’ ಇರುವುದಿಲ್ಲ.
ಮತದಾನವು ಬೆಳಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದ್ದು, ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನದ ನಿಮಿತ್ತ ಸಂತೆ ಮತ್ತು ಜಾತ್ರೆ ನಡೆಸುವುದನ್ನು ನಿರ್ಭಂಧಿಸಲಾಗಿದೆ.
ಜಿಲ್ಲೆಯಲ್ಲಿರುವ ಸೂಕ್ಷ್ಮ, ಅತೀಸೂಕ್ಷ್ಮ ಹಾಗೂ ನಕ್ಷಲ್ ಬಾಧಿತ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.
ಜಿಲ್ಲೆಯಲ್ಲಿ ಗ್ರಾ. ಪಂ. ಚುನಾವಣೆ ನಡೆಯುವ 837 ಮತಗಟ್ಟೆಗಳಿಗೆ ಮೇ 28 ರಂದು ಮತಗಟ್ಟೆ ಸಿಬ್ಬಂದಿಗಳನ್ನು 3 ನೇ ರೆಂಡೊಮೈಸೆಷನ್ ಮೂಲಕ ತಂಡಗಳನ್ನು ಅದೇ ದಿನ ರಚಿಸಿ ಚುನಾವಣೆ ನಡೆಯುವ ಮತಗಟ್ಟೆಗಳಿಗೆ ತಾಲೂಕು ಕೇಂದ್ರ ಸ್ಥಾನದಿಂದ ರವಾನಿಸಲಾಗುವುದು.
ಕುಂದಾಪುರದಲ್ಲಿ ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಉಡುಪಿಯಲ್ಲಿ ಸೈಂಟ್ ಸಿಸಿಲೀಸ್ ಶಾಲೆ ಅಜ್ಜರಕಾಡು, ಕಾರ್ಕಳದಲ್ಲಿ ಜೆಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ.
ಜಿಲ್ಲೆಯ 300 ಸೇವಾ ಮತದಾರರಿಗೆ ಚುನಾವಣೆಗೆ ಸಂಬಂಧಿಸಿದ ಸೇವಾ ಮತಪತ್ರಗಳನ್ನು ರವಾನಿಸಲಾಗಿದೆ. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮತಪತ್ರಗಳನ್ನು ಆಯಾ ಗ್ರಾ. ಪಂ ಚುನಾವಣಾಧಿಗಳ ಮೂಲಕ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಾರಂಭವಾಗಲು ನಿಗಧಿಪಡಿಸಿರುವ ಸಮಯಕ್ಕೆ ಹಿಂದಿನ 48 ಗಂಟೆಗಳ ಅವಧಿಯೊಳಗೆ ಸಾರ್ವಜನಿಕ ಸಭೆಗಳನ್ನು ನಡೆಸುವುದು ಮತ್ತು ಮತದಾನದ ದಿನ ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು ಹಾಗೂ ಕರೆದುಕೊಂಡು ಹೋಗುವುದನ್ನು ನಿರ್ಭಂಧಿಸಲಾಗಿದೆ.
ಆದರೆ ಮೇ 26 ರ ಚುನಾವಣಾ ಪ್ರಚಾರವು ರಾತ್ರಿ 10.00 ಗಂಟೆಯವರೆಗೆ ಸೀಮಿತವಾಗಿರುವುದರಿಂದ, ಮೇ 26 ರ ರಾತ್ರಿ 10.00 ಗಂಟೆಯಿಂದ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ಜಿಲ್ಲೆಯ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ಗಳಿಗೆ ಸೀಮಿತವಾಗಿ ನಿರ್ಭಂಧಿಸಲಾಗಿದೆ
ಜಿಲ್ಲೆಯಲ್ಲಿ ಮೇ 29 ರಂದು ನಡೆಯುವ ಗ್ರಾ. ಪಂ. ಚುನಾವಣೆಯಲ್ಲಿ ಮತದಾನ ಮಾಡಲು , ಭಾರತ ಚುನಾವಣಾ ಆಯೋಗದ ಆದೇಶದಂತೆ ಮತದಾರರು, ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರ ಗುರುತಿನ ಚೀಟಿ ಅಥವಾ ಈ ಕೆಳಕಾಣಿಸಿದ 22 ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರು ಪಡಿಸುವಂತೆ ಕೋರಿದೆ.
ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (Pಚಿಟಿ), ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪರಿತರ ಚೀಟಿಗಳು , ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಿಗೆ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಓಖಇಉ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ / ಮೂಲ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಆಧಾರ್ ಕಾರ್ಡ್ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಡಾ|| ವಿಶಾಲ್ ಆರ್ ರವರು ತಿಳಿಸಿರುತ್ತಾರೆ.
ಉಡುಪಿ ಜಿಲ್ಲೆಯ ವಿವಿಧ ಸನ್ನದುದಾರರಿಗೆ ಈ ಮೂಲಕ ತಿಳಿಸುವುದೇನೆಂದರೆ, 2015-16 ನೇ ಸಾಲಿಗೆ ಸನ್ನದುಗಳನ್ನು ನವೀಕರಿಸಿಕೊಳ್ಳಲು ಮೇ 30 ರೊಳಗೆ ನಿಗಧಿತ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕ ಸರ್ಕಾರಕ್ಕೆ ಪಾವತಿಸಿ, ಮೂಲ ಚಲನ್ ಹಾಗೂ ಬ್ಯಾಂಕ್ ನಿಂದ ಸದರಿ ಶುಲ್ಕ ಪಾವತಿ ಬಗ್ಗೆ ದೃಢೀಕರಣ ಪತ್ರ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ಶುಲ್ಕ ಪಾವತಿಸುವ ಮುನ್ನ ಚಲನ್ ಗಳಲ್ಲಿ ಕಾರ್ಯ ವ್ಯಾಪ್ತಿಯ ವಲಯ ಅಬಕಾರಿ ನಿರೀಕ್ಷಕರಿಂದ ಮೇಲು ರುಜುವನ್ನು ಮೇ 28 ರೊಳಗೆ ಪಡೆಯತಕ್ಕದ್ದು ವಿಳಂಬ ವಾದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.